ಸಾರ್ವಜನಿಕ ಕ್ಷೇತ್ರದ ತೈಲ ಕಂಪೆನಿಗಳು ತಮ್ಮ ನಿವ್ವಳ ಲಾಭದಲ್ಲಿ ಶೇ.2 ರಷ್ಟನ್ನು ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಗಳಿಗೆ ವೆಚ್ಚ ಮಾಡುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.
ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಚಿವ ದೇವ್ರಾ, ಸರಕಾರಿ ಸ್ವಾಮ್ಯದ ಒಎನ್‌ಜಿಸಿ, ಐಒಸಿ ತೈಲ ಸಂಸ್ಥೆಗಳು ತಮ್ಮ ನಿವ್ವಳ ಲಾಭದಲ್ಲಿ ಶೇ.0.75 ರಿಂದ ಶೇ.1 ರಷ್ಟು ವೆಚ್ಚ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ತೈಲ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆದ ಚರ್ಚೆ ಫಲಪ್ರದವಾಗಿದ್ದು,ಮುಂಬರುವ ಆರ್ಥಿಕ ವರ್ಷದಿಂದ ನಿವ್ವಳ ಲಾಭದಲ್ಲಿ ಕನಿಷ್ಟ ಶೇ.2 ರಷ್ಟನ್ನು ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಗಳಿಗೆ ವೆಚ್ಚ ಮಾಡಲು ಸಮ್ಮತಿಸಿವೆ
ಸಿಎಸ್ ಆರ್ ಚಟುವಟಿಕೆಗಳಿಗೆ ಮೀಸಲಿರಿಸಿದ ಹಣವನ್ನು ಸಂಪೂರ್ಣವಾಗಿ ಬಳಸಲಾಗದ ಹಿನ್ನೆಲೆಯಲ್ಲಿ ಉಳಿದ ಮುಂದಿನ ವರ್ಷಕ್ಕೆ ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ದೇವ್ರಾ ತಿಳಿಸಿದ್ದಾರೆ. ಕಳೆದ 2007-08ರಲ್ಲಿ ಒಎನ್‌ಜಿಸಿ 64.27 ಕೋಟಿ ರೂ,ಐಒಸಿ 28.93 ಕೋಟಿ ರೂ.ಹಿಂದೂಸ್ತಾನ್ ಪೆಟ್ರೋಲಿಯಂ 6.67 ಕೋಟಿ ರೂ, ಭಾರತ್ ಪೆಟ್ರೋಲಿಯಂ 7.38 ಕೋಟಿ ರೂಪಾಯಿ ಮತ್ತು ಗೇಲ್ 15.44 ಕೋಟಿ ರೂಪಾಯಿ ಸೇರಿದಂತೆ ಒಟ್ಟು 246.70 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಸಚಿವ ದೇವ್ರಾ ರಾಜ್ಯಸಭೆಗೆ ವಿವರಣೆ ನೀಡಿದರು. |