ಲೈಫ್ ಇನ್ಸೂರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ, ಮುಕ್ತ ಮಾರುಕಟ್ಟೆಯಲ್ಲಿ ಐಸಿಐಸಿಐ ಬ್ಯಾಂಕ್‌ನ ಶೇರುಗಳನ್ನು 145.62 ಕೋಟಿ ರೂ.ಗಳಿಗೆ ಖರೀದಿಸಿದ್ದು, ಐಸಿಐಸಿಐ ಬ್ಯಾಂಕ್‌ನ ಶೇರುಪ್ರಮಾಣದಲ್ಲಿ ಶೇ.9.38 ರಷ್ಟು ಹೆಚ್ಚಳವಾಗಿದೆ ಎಂದು ಎಲ್‌ಐಸಿ ಮೂಲಗಳು ತಿಳಿಸಿವೆ.
ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಐಸಿಐಸಿಐ ಬ್ಯಾಂಕ್, ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ 2.27 ಕೋಟಿ ಶೇರುಗಳನ್ನು 145.62 ಕೋಟಿ ರೂ.ಗಳಿಗೆ ಖರೀದಿಸಿ ಶೇ.2.04ರಷ್ಟು ಪಾಲನ್ನು ಹೊಂದಿದೆ ಎಂದು ವಿವರಗಳನ್ನು ಬಹಿರಂಗಪಡಿಸಿದೆ.
ಈ ಮೊದಲು ಎಲ್‌ಐಸಿ ಸಂಸ್ಥೆ ಐಸಿಐಸಿಐ ಬ್ಯಾಂಕ್‌ನಲ್ಲಿ ಶೇ.7.34 ರಷ್ಟು ಪಾಲನ್ನು ಹೊಂದಿತ್ತು. ಎಲ್‌ಐಸಿ ಒಟ್ಟು ಖರೀದಿಸಿದ 10.44 ಐಸಿಐಸಿಐ ಶೇರುಗಳಿಂದಾಗಿ ಶೇರುಪಾಲು ಶೇ.9.38ಕ್ಕೆ ಏರಿಕೆಯಾಗಿದೆ ಎಂದು ಎಲ್‌ಐಸಿ ಮೂಲಗಳು ತಿಳಿಸಿವೆ.
ಇಂದಿನ ಶೇರುಪೇಟೆಯ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ಶೇರುಮುಖಬೆಲೆ 232.90 ರೂ.ಗಳಾಗಿದ್ದು, ಬಿಎಸ್‌ಇ ಸೂಚ್ಯಂಕದಲ್ಲಿ ಶೇ.3.59 ರಷ್ಟು ಕುಸಿತ ಕಂಡಿವೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ. |