ದೇಶದ ವಿತ್ತ ಸಚಿವಾಲಯದ ಅದಿಕಾರಿಗಳು ಆರ್ಥಿಕ ಸ್ಥಿರತೆ ತರಲು ಕಟ್ಟುನಿಟ್ಟನ ಕ್ರಮಗಳನ್ನು ಯಶಸ್ವಿಯಾಗಿ ಕೈಗೊಂಡಲ್ಲಿ ವರ್ಷಾಂತ್ಯಕ್ಕೆ ಆರ್ಥಿಕತೆ ಮರಳಿ ಸುಸ್ಥಿತಿಗೆ ಬರಲಿದೆ ಎಂದು ರಿಸರ್ವ್ ಬ್ಯಾಂಕ್ ಮುಖ್ಯಸ್ಥ ಬೆನ್ ಎಸ್.ಬರ್ನಾನ್‌ಕೆ ಹೇಳಿದ್ದಾರೆ.
ವಿತ್ತ ಇಲಾಖೆ ಅಧಿಕಾರಿಗಳು ಕಠಿಣವಾದ ಕ್ರಮಗಳನ್ನು ಅನುಸರಿಸಿದಲ್ಲಿ ಮುಂಬರುವ 2010ರ ವೇಳೆಗೆ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅಡಳಿತ ಹಾಗೂ ಸಂಸತ್ತು ಹಾಗೂ ರಿಸರ್ವ್ ಬ್ಯಾಂಕ್ ಆರ್ಥಿಕ ಸ್ಥಿರತೆಗಾಗಿ ಕೆಲ ನಿಯಮಗಳಲ್ಲಿ ಬದಲಾವಣೆ ತಂದಲ್ಲಿ ಮುಂದಿನ ವರ್ಷ ಅಮೆರಿಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಬರ್ನಾನ್‌ಕೆ ಅಮೆರಿಕ ಸಂಸತ್ತಿಗೆ ಉಪವಾರ್ಷಿಕ ವರದಿಯ ಮಂಡನೆಯ ವೇಳೆ ತಿಳಿಸಿದ್ದಾರೆ.
ಪ್ರಸಕ್ತ ಸಂದರ್ಭದಲ್ಲಿ ದೇಶದ ಆರ್ಥಿಕತೆ ವೇಗವಾಗಿ ಕುಸಿಯುತ್ತಿದೆ. ಅನಿಶ್ಚತತೆಯಿಂದಾಗಿ ದೇಶದ ಒಟ್ಟಾರೆ ಆರ್ಥಿಕತೆ ಇಳಿಮುಖವಾಗುತ್ತಿರುವುದರಿಂದ ಕೆಲ ಕಠಿಣ ನಿಯಮಗಳ ಜಾರಿ ಹಾಗೂ ಅನಗತ್ಯವೆಚ್ಚ ಕಡಿತಡ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. |