ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ ಮಾಸಾಂತ್ಯದೊಳಗೆ 2 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಸಾಧ್ಯತೆಗಳಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಗಳು ತಿಳಿಸಿವೆ.
ಎಲ್‌ಐಸಿ ವಿಮಾ ಸಂಸ್ಥೆಯಿಂದ ತಿಂಗಳಾಂತ್ಯದಲ್ಲಿ 2 ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ನಿರೀಕ್ಷಿಸಲಾಗುತ್ತಿದೆ. ಹೂಡಿಕೆ ಹೆಚ್ಚಳ ಮಾಡುವ ಸಾಮನ್ಯ ಪ್ರಕ್ರಿಯೆವಾಗಿದೆ ಎಂದು ಬ್ಯಾಂಕ್‌ನ ಅನಾಮಧೇಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ನಂಬರ್ ಒನ್ ಸ್ಥಾನದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಬರುವ 1-2 ವರ್ಷಗಳಲ್ಲಿ 18 ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಹೆಚ್ಚಳ ಮಾಡುವ ಗುರಿಯನ್ನು ಹೊಂದಿದ್ದು, ಈಗಾಗಲೇ 4 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಲೈಫ್ ಇನ್ಶೂರೆನ್ಸ್ ಕಾರ್ಪೋರೇಶನ್ ವಿಮಾ ಸಂಸ್ಥೆಯ 2 ಸಾವಿರ ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದ ಸಾಲಿನಲ್ಲಿ 6 ಸಾವಿರ ಕೋಟಿ ರೂ.ಹೂಡಿಕೆಯ ಗುರಿಯನ್ನು ತಲುಪಲಿದ್ದು, ಬಾಂಡ್‌ಗಳು 15 ವರ್ಷದ ಅವಧಿಯನ್ನು ಹೊಂದಿರುತ್ತವೆ. ಹೂಡಿಕೆಯಾದ ಹಣವನ್ನು ಬ್ಯಾಂಕ್ ವಿಸ್ತರಣೆಗೆ ಬಳಸಿಕೊಳ್ಳಲಾಗುವುದು ಎಂದು ಎಸ್‌ಬಿಐ ಮೂಲಗಳು ತಿಳಿಸಿವೆ. |