ದೇಶದ ಪರಿಣಾಮಕಾರಿ ಆರ್ಥಿಕ ನೀತಿಗಳಿಂದಾಗಿ ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ಕೂಡಾ ಭಾರತೀಯ ಶೇರುಪೇಟೆ ಸವಾಲನ್ನು ಎದುರಿಸಲು ಸಹಕಾರಿಯಾಯಿತು ಎಂದು ಸೆಬಿ ಮುಖ್ಯಸ್ಥರು ಹೇಳಿದ್ದಾರೆ. ಶೇರುಪೇಟೆಯ ಶೇರುಸೂಚ್ಯಂಕ ಭಾರಿ ಇಳಿಕೆ ಕಂಡ ಸಂದರ್ಭದಲ್ಲಿ ಕೂಡಾ ಶೇರುಪೇಟೆ ನಿಗದಿತ ಅವಧಿಗೆ ಚೇತರಿಕೆ ಕಾಣಲು ಸಾಧ್ಯವಾಯಿತು ಎಂದು ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿಯ ಮುಖ್ಯಸ್ಥ ಸಿ.ಬಿ.ಭಾವೆ ತಿಳಿಸಿದ್ದಾರೆ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದಾಗಿ ಶೇರುಪೇಟೆಗಳನ್ನು ಸ್ಥಗಿತಗೊಳಿಸಬೇಕಾಯಿತು. ಅಥವಾ ಕೆಲ ವಾರಗಳ ಅವಧಿಗೆ ಅಮಾನತುಗೊಳಿಸಬೇಕಾಯಿತು. ಆದರೆ ಭಾರತದ ಶೇರುಪೇಟೆಗೆ ಅಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಎದುರಾಗಲಿಲ್ಲ ಎಂದು ಹೇಳಿದ್ದಾರೆ. ಅಮೆರಿಕದಲ್ಲಿರುವ ಲೆಹ್ಮಾನ್ ಬ್ರದರ್ಸ್ ಬ್ಯಾಂಕ್ ಅವನತಿಯೊಂದಿಗೆ ಕಾರ್ಪೋರೇಟ್ ಕಂಪೆನಿಗಳ ಮೇಲಿರಿಸದ ಜನತೆಯ ವಿಶ್ವಾಸ ಕುಸಿದಿದ್ದರಿಂದ ಜಗತ್ತಿನ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿತು ಎಂದು ಭಾವೆ ಹೇಳಿದ್ದಾರೆ. |