ಕೇಂದ್ರ ಸರಕಾರ ಕಡಿತ ಮಾಡಿದ ಅಬಕಾರಿ ತೆರಿಗೆಯ ಲಾಭವನ್ನು ಗ್ರಾಹಕರಿಗೆ ನೀಡಲು ಉದ್ದೇಶಿಸಲಾಗಿದ್ದು, ಟ್ರಕ್ ದರಗಳಲ್ಲಿ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅಶೋಕ್ ಲೆಲ್ಯಾಂಡ್ ಕಂಪೆನಿಯ ಮೂಲಗಳು ತಿಳಿಸಿವೆ.
ಕೇಂದ್ರದಲ್ಲಿರುವ ಯುಪಿಎ ಸರಕಾರ ವಾಹನೋದ್ಯಮದ ವಸ್ತುಗಳು ಹಾಗೂ ಟ್ರಕ್‌ಗಳ ಮೇಲೆ ಶೇ.10 ರಷ್ಟಿದ್ದ ಅಬಕಾರಿ ತೆರಿಗೆಯನ್ನು ಶೇ.8 ಕ್ಕೆ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಟ್ರಕ್‌ಗಳ ದರಗಳಲ್ಲಿ ಸರಾಸರಿ 16,000 ರೂಪಾಯಿಗಳ ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಅಬಕಾರಿ ತೆರಿಗೆಯಲ್ಲಿ ಏರಿಕೆಯಾಗಿದ್ದರಿಂದ ವಾಹನೋದ್ಯಮ ಸಂಸ್ಥೆಗಳು ಹೆಚ್ಚಿನ ನಷ್ಟವನ್ನು ಎದುರಿಸುತ್ತಿದ್ದವು. ಆದರೆ ಕೇಂದ್ರ ಸರಕಾರದ ಅಬಕಾರಿ ತೆರಿಗೆ ಕಡಿತ ನಿರ್ಧಾರದಿಂದ ವಾಹನೋದ್ಯಮ ಸಂಸ್ಥೆಗಳ ಚೇತರಿಕೆಗೆ ಕಾರಣವಾಗಲಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. |