ದೇಶದ ವಿದೇಶಿ ವಿನಿಮಯ ಸಂಗ್ರಹ ಉತ್ತಮ ಸ್ಥಿತಿಯಲ್ಲಿದ್ದು, ನೇರವಾಗಿ ಆರ್ಥಿಕ ಹೊರೆ ಎದುರಾಗಲು ಸಾಧ್ಯವಿಲ್ಲ ಎಂದು ವಿತ್ತ ಸಚಿವರು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ವಿದೇಶಿ ವಿನಿಮಯ ಸಂಗ್ರಹ ಸಮರ್ಪಕವಾದ ಮಟ್ಟದಲ್ಲಿರುವುದರಿಂದ ಆರ್ಥಿಕತೆಯ ಬಿಕ್ಕಟ್ಟು ಎದುರಾಗುವುದಿಲ್ಲ ಎಂದು ಕೇಂದ್ರ ವಿತ್ತ ಖಾತೆಯ ರಾಜ್ಯ ಸಚಿವ ಪಿ.ಕೆ.ಬನ್ಸಾಲ್ ಸಂಸತ್ತಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ದೇಶದ ಮೀಸಲು ಸಂಗ್ರಹ ಕಳೆದ ಐದು ತಿಂಗಳ ಅವಧಿಯಲ್ಲಿ ಶೇ.15 ರಷ್ಟು ಕುಸಿತ ಎದುರಾದ ನಂತರ ಕೇಂದ್ರ ಸರಕಾರ ಅಶ್ವಾಸನೆ ಹೊರಬಿದ್ದಿದೆ. ವಿದೇಶಿ ವಿನಿಮಯ ಸಂಗ್ರಹ ಕುಸಿತದ ಕುರಿತಂತೆ ವಿವರಣೆ ನೀಡಿದ ಸಚಿವ ಬನ್ಸಾಲ್ ಡಾಲರ್ ಎದುರಿಗೆ ಇತರ ಕರೆನ್ಸಿಗಳ ಚಲಾವಣೆಯ ವಿನಿಮಯ ದರವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಧ್ಯಸ್ಥಿಕೆವಹಿಸಿದ್ದರಿಂದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಅಲ್ಪ ಕುಸಿತ ಎದುರಾಗಿದೆ ಎಂದು ಸಚಿವ ಬನ್ಸಾಲ್ ಲೋಕಸಭೆಗೆ ತಿಳಿಸಿದ್ದಾರೆ. |