ಜಾಗತಿಕ ಆರ್ಥಿಕ ಕುಸಿತದಿಂದಾಗಿ ರಿಯಲ್ಟಿ ಹಾಗೂ ಶೇರುಪೇಟೆಗಳಲ್ಲಿ ಹೂಡಿಕೆದಾರರಿಗೆ ಹೂಡಿಕೆಗೆ ಅವಕಾಶಗಳು ಕ್ಷಿಣಿಸುತ್ತಿರುವುದರಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಆಕರ್ಷಿತರಾಗುತ್ತಿರುವುದರಿಂದ ಮುಂಬರುವ ಅಗಸ್ಟ್ ತಿಂಗಳಲ್ಲಿ ಚಿನ್ನದ ದರ 17 ಸಾವಿರ ಗಡಿಯನ್ನು ದಾಟಲಿದೆ ಎಂದು ಕೈಗಾರಿಕೋದ್ಯಮ ಸಂಘ ಅಸೋಚಾಮ್ ಹೇಳಿದೆ. ಅದರಂತೆ ಬೆಳ್ಳಿಯ ದರಗಳು ಕೂಡಾ ಪ್ರತಿ ಕೆಜಿಗೆ 24 ಸಾವಿರ ರೂಪಾಯಿಗಳವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಸೋಚಾಮ್ ತಿಳಿಸಿದೆ. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಸ್ಥಿರಾಸ್ಥಿ, ಶೇರು,ಮ್ಯೂಚುವಲ್ ಫಂಡ್, ಸರಕಾರಿ ಬಾಂಡ್‌ಗಳ ಮೇಲೆ ಆಕರ್ಷಕ ಮರುಪಾವತಿ ಘೋಷಿಸಿದರೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ನಿರಂತರ ಏರಿಕೆಯಾಗುತ್ತಿದ್ದು, ಅಗಸ್ಟ್ ತಿಂಗಳಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 17 ಸಾವಿರ ರೂ. ಹಾಗೂ ಬೆಳ್ಳಿ ಪ್ರತಿ.ಕೆಜಿಗೆ 24 ಸಾವಿರ ರೂಪಾಯಿ ದರದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಸೋಚಾಮ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್ ತಿಂಗಳ ಅವಧಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ ಸರಾಸರಿ 15,750 ರೂಪಾಯಿಗಳಾಗಿದ್ದು, ಬೆಳ್ಳಿ ಪ್ರತಿಕೆಜಿಗೆ 23,ಸಾವಿರ ರೂ.ಗಳಿಗೆ ತಲುಪಿದೆ. |