ವಾರ್ಷಿಕ ಹಣದುಬ್ಬರ ದರ ಕಳೆದ ವಾರ ಶೇ.3.92 ರಷ್ಟಿದ್ದು ಫೆಬ್ರವರಿ 14ಕ್ಕೆ ಅಂತ್ಯಗೊಂಡಂತೆ ಪ್ರಸಕ್ತ ವಾರದಲ್ಲಿ ಶೇ.3.36 ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಫೆಬ್ರವರಿ 14ಕ್ಕೆ ಅಂತ್ಯಗೊಂಡ ವಾರದಲ್ಲಿ ಶೇ.5.66 ರಷ್ಟಿದ್ದ ಹಣದುಬ್ಬರ ದರ ಪ್ರಸಕ್ತ ವರ್ಷದಲ್ಲಿ ಶೇ.3.36ಕ್ಕೆ ಇಳಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ವಾರಗಳ ಹಿಂದೆ ಕಚ್ಚಾ ತೈಲ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತಗೊಂಡಿದ್ದರಿಂದ ಕುಸಿತಗೊಂಡಿತ್ತು. ಪ್ರಸಕ್ತ ವಾರದಲ್ಲಿ ಉತ್ಪಾದನಾ ಕ್ಷೇತ್ರದ ವಸ್ತುಗಳ ದರಗಳು ಕುಸಿತವಾದ ಹಿನ್ನೆಲೆಯಲ್ಲಿ ಮತ್ತಷ್ಟು ಹಣದುಬ್ಬರ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರದ ಬಿಗಿ ಮೇಲ್ವಿಚಾರಕ ನೀತಿ ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ಪಾದಕ ವಸ್ತುಗಳ ಸೂಚ್ಯಂಕ ಹಿಂದಿನ ವಾರದಲ್ಲಿ 199.7 ರಿಂದ 199.5ಕ್ಕೆ ಕುಸಿತ ಕಂಡಿತ್ತು. ಆದರೆ ಪ್ರಾಥಮಿಕ ಅಗತ್ಯ ವಸ್ತುಗಳ ಸೂಚ್ಯಂಕ 248.0 ದಿಂದ 248.1ಕ್ಕೆ ಏರಿಕೆಯಾಗಿತ್ತು. ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಆರ್ಥಿಕ ಕುಸಿತವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸಾರ್ವಜನಿಕ ಹಾಗೂ ಖಸಗಿ ಕ್ಷೇತ್ರದ ಬ್ಯಾಂಕ್‌ಗಳು ಮತ್ತಷ್ಟು ಬಡ್ಡಿ ದರ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದ್ದರು ಕೇಂದ್ರ ಸರಕಾರ ದೇಶಿಯ ಉತ್ಪನ್ನಗಳಿಗೆ ಬೇಡಿಕೆ ದೊರೆಯಲು ಅಬಕಾರಿ ತೆರಿಗೆ ಹಾಗೂ ಸೇವಾ ತೆರಿಗೆಯಲ್ಲಿ ಶೇ.2 ರಷ್ಟು ಕಡಿತಗೊಳಿಸಿ ಈಗಾಗಲೇ ಆದೇಶ ಹೊರಡಿಸಿದೆ. |