ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಶನ್ ಅಡಳಿತ ಮಂಡಳಿ ಅನಧಿಕೃತವಾಗಿ 34 ಹುದ್ದೆಗಳನ್ನು ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಹಿಂದಿ ನೇಪಾಳಿ ಮತ್ತು ಉರ್ದು ವಿಭಾಗಗಳ ಪತ್ರಕರ್ತರು ಒಂದು ದಿನದ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಬಿಸಿ ಉದ್ಯೋಗಿಗಳು ಮಧ್ಯಾಹ್ನ 12 ಗಂಟೆಯಿಂದ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು,ರಾತ್ರಿ 11.59 ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ದಕ್ಷಿಣ ಏಷ್ಯಾದ ಮೂರು ರಾಷ್ಟ್ರಗಳ ವಿಭಾಗಗಳಲ್ಲಿ ಹುದ್ದೆಗಳ ಕಡಿತ ಕುರಿತಂತೆ ಅಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಮಧ್ಯೆ ಕಳೆದ ಒಂದು ವರ್ಷದಿಂದ ಮಾತುಕತೆ ಮುಂದುವರಿದಿದ್ದು ಫಲಪ್ರದವಾಗಿಲ್ಲವೆಂದು ಬಿಬಿಸಿ ಮೂಲಗಳು ತಿಳಿಸಿವೆ.
ದಕ್ಷಿಣ ಏಷ್ಯಾದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಶನ್ ಉದ್ಯೋಗಿಗಳು ಕಳೆದ ವರ್ಷ ಅಮೆರಿಕ ಅದ್ಯಕ್ಷ ಜಾರ್ಜ್ ಬುಷ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಇಂದು ಶ್ವೇತಭವನದ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಬಿಬಿಸಿ ವರ್ಲ್ಡ್ ಸರ್ವಿಸ್ ಉಳಿಸಿ ಎನ್ನುವ ಪ್ರಚಾರದೊಂದಿಗೆ ಮುಷ್ಕರ ಆರಂಭಿಸಲಾಗಿದ್ದು, ಬ್ರಿಟನ್‌ನ ನ್ಯಾಷನಲ್ ಯುನಿಯನ್ ಆಫ್ ಜರ್ನಲಿಸ್ಟ್ ಮತ್ತು ಬ್ರಾಡ್‌ಕಾಸ್ಟ್ ಎಂಟರ್‌ಟೇನ್‌ಮೆಂಟ್ ಸಿನಿಮಾ ಥಿಯೇಟರ್ ಯುನಿಯನ್ ಸಂಘಟನೆಗಳು ಬೆಂಬಲಿಸಿವೆ ಎಂದು ಬಿಬಿಸಿ ಉದ್ಯೋಗಿಗಳ ಸಂಘ ಹೇಳಿಕೆ ನೀಡಿದೆ. |