ಜಗತ್ತಿನ ಅತಿ ಕಡಿಮೆ ದರದ ಸುಂದರವಾದ ಮಾಡೆಲ್‌ನ ನ್ಯಾನೋ ಕಾರನ್ನು ಮಾರ್ಚ್ 23 ರಂದು ಮುಂಬೈನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಏಪ್ರಿಲ್‌ನಿಂದ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ ಎಂದು ಟಾಟಾ ಮೋಟಾರ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಜನೆವರಿ 2008ರಲ್ಲಿ ಮೊದಲ ಬಾರಿಗೆ ನ್ಯಾನೋ ಮಾಡೆಲ್‌ನ್ನು ಅಟೋಎಕ್ಸಪೋ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು. ಮಾರ್ಚ್ 23 ರಂದು ನ್ಯಾನೋ ಕಾರು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ. ಏಪ್ರಿಲ್ 2009ರಿಂದ ಟಾಟಾ ಮೋಟಾರ್ಸ್ ಡೀಲರ್‌ಶಿಪ್ ಶೋರೂಂಗಳಲ್ಲಿ ನ್ಯಾನ್ಯೋ ಕಾರು ಲಭ್ಯವಾಗಲಿವೆ. ಏಪ್ರಿಲ್ 2ನೇ ವಾರದಿಂದ ಬುಕ್ಕಿಂಗ್ ಆರಂಭವಾಗಲಿದೆ ಎಂದು ಟಾಟಾ ಮೋಟಾರ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ನ್ಯಾನೋ ಕಾರಿನ ಮುಂಗಡ ಬುಕ್ಕಿಂಗ್ ಮತ್ತಿತರ ವಿವರಗಳನ್ನು ಮಾರ್ಚ್ 23 ರಂದು ಮುಂಬೈನಲ್ಲಿ ನಡೆಯುವ ಸಮಾರಂಭದಲ್ಲಿ ಘೋಷಿಸಲಾಗುವುದು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾನೋ ಕಾರಿನ ಮುಂಗಡ ಬುಕ್ಕಿಂಗ್‌ಗಾಗಿ ಟಾಟಾ ಮೋಟಾರ್ಸ್ ಕಂಪೆನಿ ದೇಶದಾದ್ಯಂತ ಅತ್ಯುತ್ತಮ ಬೃಹತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಿದ್ದು,ಗ್ರಾಹಕರಿಗೆ ಸುಲಭವಾಗಿ ನ್ಯಾನೋ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |