ನವದೆಹಲಿ: ರೂಪಾಯಿ ಮೌಲ್ಯ ಶುಕ್ರವಾರ ದಾಖಲೆಯ ಕುಸಿತ ಕಂಡಿದೆ. ಯುಎಸ್ ಡಾಲರ್ ಎದುರು ರೂಪಾಯಿ 50.69ಕ್ಕೆ ಇಳಿಯುವ ಮೂಲಕ ಈ ಕುಸಿತ ದಾಖಲೆ ಎಂದು ಫಾರೆಕ್ಸ್ ಪರಿಗಣಿಸಿದೆ. ವಿದೇಶೀ ಬಂಡವಾಳ ಹೂಡಿಕೆಯ ಹೊರಹರಿವು ಹಾಗೂ ಆಮದುದಾರರಿಂದ ಡಾಲರ್‌ನ ಹೆಚ್ಚಿದ ಬೇಡಿಕೆಯಿಂದ ರೂಪಾಯಿಯಲ್ಲಿ ಭಾರೀ ಕುಸಿತವಾಗಿದೆ. ಫಾರೆಕ್ಸ್ ಪ್ರಕಾರ, ಕಳೆದ ದಿನದಿಂದ ರೂಪಾಯಿ ಮೌಲ್ಯ 23 ಪೈಸೆಯಷ್ಟು ಮತ್ತೆ ಇಳಿದಿದೆ. ಅಂದರೆ ಈಗ ಡಾಲರ್ ಬೆಲೆ 50.69 ರೂಪಾಯಿಗಳು ಎಂದು ದಾಖಲಾಗಿದೆ. ಗುರುವಾರ ರೂಪಾಯಿ ಮೌಲ್ಯ 52 ಪೈಸೆ ಇಳಿದಿತ್ತು. |