ಪ್ರಮುಖ 11 ನಗರಗಳಲ್ಲಿ ಥರ್ಡ್ ಜನರೇಷನ್ (3ಜಿ) ಸೇವೆಯನ್ನು ಆರಂಭಿಸುವುದಾಗಿ ಭಾರತ್ ಸಂಚಾರ್ ನಿಗಮ್ ಲಿ.(ಬಿಎಸ್‌ಎನ್‌ಎಲ್) ಶುಕ್ರವಾರ ತಿಳಿಸಿದ್ದು, ಅಲ್ಲದೇ ದೇಶದ ಇತರ ಭಾಗಗಳಲ್ಲೂ ಸ್ಮಾರ್ಟ್ ಫೋನ್ ಸೇವೆಯನ್ನು ವಿಸ್ತರಿಸುವ ಯೋಜನೆ ಹೊಂದಿರುವುದಾಗಿ ಹೇಳಿದೆ.
3ಜಿ ಸೇವೆಗಾಗಿ ಬಿಎಸ್ಎನ್‌ಎಲ್ ಒಟ್ಟು 2,700ಕೋಟಿ ರೂಪಾಯಿಯನ್ನು ಹೂಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದು, ಮತ್ತು ಈ ಸೇವೆಯನ್ನು ಎಲ್ಲಾ ಜಿಲ್ಲಾ ಕೇಂದ್ರ ಸ್ಥಳ ಮತ್ತು ಪ್ರಮುಖ ನಗರಗಳಲ್ಲಿ ವಿಸ್ತರಿಸುವುದಾಗಿ ವಿವರಿಸಿದೆ.
ಥರ್ಡ್ ಜನರೇಶನ್ ಸೇವೆಯು ಗ್ರಾಹಕರಿಗೆ ತ್ವರಿತವಾಗಿ ಇಂಟರ್ನೆಟ್ ಸೇವೆ ಲಭ್ಯವಿರುವುದಾಗಿ ಹೇಳಿದೆ. ಅಲ್ಲದೇ ಗೇಮ್ಸ್, ಮಲ್ಟಿಮೀಡಿಯಾ ಕಂಟೆಂಟ್ ಸೌಲಭ್ಯ ಇದೆ. |