ಜಪಾನ್‌ನ ಪ್ರತಿಷ್ಠಿತ ಸೋನಿ ಕಾರ್ಪೋರೇಶನ್‌ನ ಅಧ್ಯಕ್ಷ ರೊಯೋಜಿ ಚುಬಾಚಿ ಏಪ್ರಿಲ್ ತಿಂಗಳಿನಲ್ಲಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಶುಕ್ರವಾರ ತಿಳಿಸಿದೆ.
ಚುಬಾಜಿ ಅವರ ತೆರವಾಗುವ ಸ್ಥಾನಕ್ಕೆ ಹೋವಾರ್ಡ್ ಸ್ಟ್ರಿಂಚರ್ ನೇಮಕಗೊಳ್ಳಲಿದ್ದಾರೆ ಎಂದು ಕಂಪೆನಿ ಪ್ರಕಟಣೆ ಹೇಳಿದೆ. ಅಲ್ಲದೇ ಮ್ಯಾನೇಜ್‌ಮೆಂಟ್‌ನಲ್ಲಿ ಅಮೂಲಾಗ್ರ ಬದಲಾವಣೆ ಮಾಡುವುದಾಗಿಯೂ ಟೋಕಿಯೋ ಮೂಲದ ಎಲೆಕ್ಟ್ರಾನಿಕ್ ಕಂಪೆನಿ ಘೋಷಿಸಿದೆ.
ಏಪ್ರಿಲ್ 1ರಂದು ಕಂಪೆನಿಯ ಅಧ್ಯಕ್ಷ ಹುದ್ದೆಯಿಂದ ಡಾ.ರೊಯೋಜಿ ಚುಬಾಚಿ ಕೆಳಗಿಳಿದ ನಂತರ, ಅವರು ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಸೋನಿ ಪ್ರಕಟಣೆಯಲ್ಲಿ ಹೇಳಿದೆ. ಅವರು ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಲಿದ್ದಾರೆ.
ಮೂರನೇ ತ್ರೈಮಾಸಿಕ ಜನವರಿ ತಿಂಗಳ ವರದಿಯಂತೆ ಸೋನಿ ಸುಮಾರು 200ಮಿಲಿಯನ್ ಡಾಲರ್ ನಷ್ಟ ಅನುಭವಿಸಿರುವುದಾಗಿ ತಿಳಿಸಿದ್ದು, ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಕಂಪೆನಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿರುವುದೇ ಇದಕ್ಕೆ ಕಾರಣ ಎಂದು ವಿವರಿಸಿದೆ. |