ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ತಟ್ಟಿರುವ ಚೀನಾದಲ್ಲೂ ಕೂಡ ಕಳೆದ ಆರು ತಿಂಗಳಲ್ಲಿ 160,000 ಗುತ್ತಿಗೆ ನೌಕರರು ಕೆಲಸ ಕಳೆದುಕೊಂಡಿರುವುದಾಗಿ ಸರಕಾರದ ವರದಿ ಶುಕ್ರವಾರ ತಿಳಿಸಿದೆ.
'ನಿಜಕ್ಕೂ ಇದೊಂದು ತುಂಬಾ ಗಂಭೀರವಾದ ಪರಿಸ್ಥಿತಿ'ಯಾಗಿದೆ ಎಂದು ಕಾರ್ಮಿಕ ಸಚಿವ ಯೋಚಿ ಮುಸುಝೋಯೆ ಪಾರ್ಲಿಮೆಂಟ್‌ನಲ್ಲಿ ಮಾತನಾಡುತ್ತ ದೇಶದ ಆರ್ಥಿಕ ಹಿಂಜರಿತ ಕುರಿತು ವಿವರಣೆ ನೀಡಿದರು.
ಕೆಲಸ ಕಳೆದುಕೊಂಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸವನ್ನು ಹುಡುಕುತ್ತಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕಳೆದ ವರ್ಷ ಅಕ್ಟೋಬರ್‌ನಿಂದ ಪ್ರಸಕ್ತ ಸಾಲಿನ ಮಾರ್ಚ್‌ವರೆಗೆ 157,806 ತಾತ್ಕಾಲಿಕ ನೌಕರರು ಕೆಲಸ ಕಳೆದುಕೊಂಡಿದ್ದಾರೆ ಅಥವಾ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇರುವುದಾಗಿ ಸಚಿವರು ಹೇಳಿದರು. |