ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಡೆಲ್ ಕಂಪೆನಿ ಆದಾಯದಲ್ಲಿ ಶೇ.48ರಷ್ಟು ಹೊಡೆತ ಬಿದ್ದಿರುವುದಾಗಿ ತಿಳಿಸಿದ್ದು, ಆ ನಿಟ್ಟಿನಲ್ಲಿ ನಷ್ಟವನ್ನು ತುಂಬಿಸಿಕೊಳ್ಳುವ ಸಲುವಾಗಿ ಏಷಿಯನ್ ಪೆಸಿಫಿಕ್ ರಿಜನ್‌ನ ನೌಕರರನ್ನು ಕೆಲಸದಿಂದ ವಜಾ ಮಾಡುವ ಮೂಲಕ ಸುಮಾರು 4ಬಿಲಿಯನ್ ಹಣವನ್ನು ಉಳಿತಾಯ ಮಾಡುವ ಯೋಜನೆ ಹೊಂದಿರುವುದಾಗಿ ಹೇಳಿದೆ.
ಅಮೆರಿಕ ಮೂಲದ ಡೆಲ್ ಕಂಪೆನಿಯ ನೆಟ್ ಆದಾಯದಲ್ಲಿ ಶೇ.48ರಷ್ಟು ಕಳೆದ ತ್ರೈಮಾಸಿಕ ಆದಾಯದ ವರದಿಯಂತೆ ಸುಮಾರು 351ಮಿಲಿಯನ್ ನಷ್ಟ ಅನುಭವಿಸಿದೆ. ಕಳೆದ ವರ್ಷ 679ಮಿಲಿಯನ್‌ಷ್ಟು ಆರ್ಥಿಕ ನಷ್ಟ ಉಂಟಾಗಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ ಕಂಪೆನಿಯ ನಷ್ಟವನ್ನು ಸರಿದೂಗಿಸುವಲ್ಲಿ ಎಷ್ಟು ಮಂದಿ ನೌಕರರನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂಬ ಬಗ್ಗೆ ವಿವರಣೆ ನೀಡದ ಡೆಲ್ ಅಧ್ಯಕ್ಷ ಸ್ಟೇವೆ ಫೆಲಿಸೆ, ದಕ್ಷಿಣ ಏಷಿಯಾ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ನೌಕರರನ್ನು ತೆಗೆಯುವ ಯೋಜನೆ ಹೊಂದಿರುವುದಾಗಿ ಹೇಳಿದ್ದಾರೆ. |