ಬಿಎಸ್ಎನ್ಎಲ್ ತನ್ನ 3ಜಿ ಸೇವೆಯನ್ನು ದೆಹಲಿಯಲ್ಲೂ ಆರಂಭಿಸಿದ್ದು, ನಿಮಿಷಕ್ಕೆ ಒಂದು ರೂಪಾಯಿ ದರದಲ್ಲಿ ವಿಡಿಯೋ ಕರೆ ಲಭ್ಯವಾಗಲಿದೆ. 2,500 ರೂಪಾಯಿಗಳ ಪ್ಲಾನ್‌ನಲ್ಲಿ ಈ ಸೇವೆ ಲಭ್ಯವಿದ್ದು, ಈಗ ನವದೆಹಲಿ ರಾಜ್ಯದಲ್ಲೂ 11 ನಗರಗಳಲ್ಲಿ ಈ ಸೇವೆಯನ್ನು ಒದಗಿಸಲಿದೆ. ಜಮ್ಮುವಿನಲ್ಲೂ 3ಜಿ ಸೇವೆ ಆರಂಭಿಸಿದ್ದು, ಸದ್ಯದಲ್ಲೇ ಇದನ್ನು ಅಲ್ಲಿನ ಹಲವು ಪ್ರಮುಖ ನಗರಗಳಿಗೆ ವಿಸ್ತರಿಸಲಿದೆ.
ಪ್ರೀಪೇಯ್ಡ್, ಪೋಸ್ಟ್ ಪೇಯ್ಡ್ ಸೌಲಭ್ಯದಲ್ಲಿ ವಾಯ್ಸ್, ವಿಡಿಯೋ ಹಾಗೂ ಡಾಟಾ ಪ್ಲಾನ್ಗಳನ್ನು ಇದು ಒಳಗೊಂಡಿದೆ. ಸ್ಥಳೀಯ ವಾಯ್ಸ್ ಕರೆ ನಿಮಿಷಕ್ಕೆ ಕೇವಲ 10 ಪೈಸೆ ದರದಲ್ಲಿ ಒಂದು ಸಾವಿರ ರುಪಾಯಿಗಳ ಪ್ಲಾನ್‌ನಡಿ ಲಭ್ಯವಾಗಲಿದೆ. ಹಾಗೆಯೇ ಸ್ಥಳೀಯ ವಿಡಿಯೋ ಕರೆ ನಿಮಿಷಕ್ಕೆ ಒಂದು ರೂಪಾಯಿ ದರದಲ್ಲಿ, ಹಾಗೂ ಎಸ್‌ಟಿಡಿ ವಿಡಿಯೋ ಕರೆ ನಿಮಿಷಕ್ಕೆ ಎರಜು ರೂ ದರದಲ್ಲಿ 2,500 ರೂಪಾಯಿ ಪ್ಲಾನ್‌ನಡಿ ದೊರೆಯುತ್ತದೆ. ಕಳೆದ ವಾರ ತಮಿಳ್ನಾಡಿನಲ್ಲಿ ಈ ಸೇವೆ ಆರಂಭಗೊಂಡಿತ್ತು. |