ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ. ಯುಎಸ್ ಡಾಲರ್ ಎದುರು 51.16 ರೂಪಾಯಿಗಳು ದಾಖಲಾಗುವ ಮೂಲಕ ಮತ್ತೊಮ್ಮೆ ದಾಖಲೆಯ ಕುಸಿತ ಕಂಡಿದೆ.
ಗುರುವಾರವಷ್ಟೆ 50.69 ರೂಪಾಯಿಗಳು ದಾಖಲಾಗುವ ಮೂಲಕ ಅತಿ ಹೆಚ್ಚಿನ ಕುಸಿತ ಎಂದೇ ಬಿಂಬಿಸಲ್ಪಟ್ಟಿತ್ತು. ಆದರೆ ಈಗ ಮತ್ತಷ್ಟು ಇಳಿಕೆ ಕಂಡಿದೆ. ತಿಂಗಳ ಕೊನೆಯಲ್ಲಿ ಹೆಚ್ಚಿದ ಡಾಲರ್ ಬೇಡಿಕೆ, ತೈಲ ಆಮದು, ವಿದೇಶೀ ಹೂಡಿಕೆಯ ಹೊರಹರಿವು ಮತ್ತಿತರ ಕಾರಣಗಳಿಂದ ಈ ಕುಸಿತ ದಾಖಲಾಗಿದೆ. ಆದರೆ, ಇದು ಇನ್ನೂ ಕುಸಿಯುವ ಲಕ್ಷಣಗಳಿದ್ದು, 52 ರೂಪಾಯಿಗಳವರೆಗೆ ಇಳಿಯುವ ಸಾಧ್ಯತೆಗಳಿವೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. |