ಸ್ಟೀಲ್ ಹಾಗೂ ಸಿಮೆಂಟ್ ವಲಯದ ಪುನಶ್ಚೇತನ ಹಾಗೂ ರಾಜ್ಯಗಳಲ್ಲಿ ಧಾರಾಳವಾಗಿರುವ ಬಂಡವಾಳದಿಂದಾಗಿ ದೇಶ ಈ ಆರ್ಥಿಕ ವರ್ಷದಲ್ಲಿ ಶೇ.7ರಷ್ಟು ಅಭಿವೃದ್ಧಿ ಹೊಂದಲಿದೆ ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ದೇಶ ಸುಮಾರು ಶೇ.6.9 ಅಥವಾ 7.1ರಷ್ಟು ಅಭಿವೃದ್ಧಿ ಹೊಂದಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಅಂದರೆ ಸುಮಾರು ಏಳರಷ್ಟು ಅಭಿವೃದ್ಧಿಯಾಗುವುಗು ಖಂಡಿತ. ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ.5.3ರಷ್ಟು ಆರ್ಥಿಕ ಬೆಳವಣಿಗೆ ದಾಖಲಾಗಿದೆ ಎಂದು ವಿವರಿಸಿದರು.
ಸಿಮೆಂಟ್, ಸ್ಟೀಲ್ ಉದ್ಯಮಗಳ ಪುನಶ್ಚೇತನ, ಗೃಹ ಉದ್ಯಮಗಳಿಂದ ರಾಜ್ಯಗಳು ಆರ್ಥಿಕವಾಗಿ ಸಾಕಷ್ಟು ಲಾಭ ಗಳಿಸಿವೆ ಎಂಬ ಪ್ರಣಬ್, ಒಟ್ಟಾರೆ 91,000 ಕೋಟಿ ರುಪಾಯಿಗಳ ಗಳಿಕೆಯಾಗಿದೆ. ಸರಿಯಾದ ಸಂಖ್ಯಾವಾರು ವಿವರ ಈ ಆರ್ಥಿಕ ವರ್ಷದ ಅಂತ್ಯದಲ್ಲಿ ತಿಳಿಯಬಹುದು ಎಂದರು. |