ಏವಿಯೇಷನ್ ಟರ್ಬೈನ್ ಪೆಟ್ರೋಲ್ ದರದಲ್ಲಿ ಶೇ.7ರಷ್ಟು ಮತ್ತೆ ಕಡಿತಗೊಳಿಸಿರುವುದಾಗಿ ರಾಜ್ಯ ತೈಲೋತ್ಪನ್ನ ಮಾರಾಟಗಾರರು ಶನಿವಾರ ತಿಳಿಸಿದ್ದು, ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೂ ದರ ಕಡಿತಗೊಳಿಸಲಾಗಿತ್ತು.
ದೆಹಲಿಯಲ್ಲಿ ಏವಿಯೇಷನ್ ಟರ್ಬೈನ್ ಫ್ಯೂಯೆಲ್ (ಎಟಿಎಫ್) ದರವನ್ನು 7ಶೇ.ಕಡಿತಗೊಳಿಸಿದ್ದು, ಲೀಟರ್‌ವೊಂದಕ್ಕೆ 27,106ರೂ ಇದ್ದು, 2,052ರೂ. ಕಡಿಮೆಯಾಗಲಿದೆ. ಅದು ಶನಿವಾರ ಮಧ್ಯರಾತ್ರಿಯಿಂದಲೇ ಜಾರಿ ಬರಲಿದೆ ಎಂದು ಭಾರತದ ಬೃಹತ್ ತೈಲ ಮಾರಾಟ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸಕ್ತ ಸಾಲಿನ ಜನವರಿ 16ರಂದು 3.3ಶೇ.ದಷ್ಟು ದರ ಏರಿಕೆ ಮಾಡಲಾಗಿತ್ತು, ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿದಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ದರ ಕಡಿತಗೊಳಿಸಬೇಕು ಎಂದು ಆಗ್ರಹಿಸಲಾಗಿತ್ತು.
ದೇಶದ ಅತ್ಯಂತ ಬಿಡುವಿಲ್ಲದ ವಿಮಾನ ನಿಲ್ದಾಣವಾಗಿರುವ ಮುಂಬೈಯಾಗಿದೆ, ಇಲ್ಲಿನ ಎಟಿಎಫ್ ದರದಲ್ಲಿ ಲೀಟರ್‌ವೊಂದಕ್ಕೆ 29,985.19ರೂ ವಿನಿಂದ 27,861ರೂ.ಗೆ ಇಳಿದಿದೆ. |