ಅಹಮ್ಮದಾಬಾದ್ ಮೂಲದ ಟೋರೆಂಟ್ ಪವರ್ ಲಿಮಿಟೆಡ್ ದೇಶದ ನಂ.1 ಪ್ರತಿಷ್ಠಿತ ಬೃಹತ್ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಹಮ್ಮದಾಬಾದ್ ಮೂಲದ ಟೋರೆಂಟ್ ಪವರ್ ಲಿಮಿಟೆಡ್ ಕಾನ್‌ಪುರ್, ಆಗ್ರಾ ಹಾಗೂ ಉತ್ತರಪ್ರದೇಶಗಳಲ್ಲಿ ವಿದ್ಯುತ್ ಅನ್ನು ಗುತ್ತಿಗೆ ಆಧಾರದಲ್ಲಿ ಹಂಚುತ್ತಿದ್ದು, 2009ರ ಅಕ್ಟೋಬರ್‌ವರೆಗೆ 20.5ಬಿಲಿಯನ್ ಯೂನಿಟ್‌ನಷ್ಟು ವಿದ್ಯುತ್‌ನ್ನು ಸರಬರಾಜು ಮಾಡಿದೆ.
ಆಗ್ರಾದ ಹಳ್ಳಿಗಳಿಗೆ, ಉತ್ತರಪ್ರದೇಶ ಹಾಗೂ ಕಾನ್‌ಪುರ ಪ್ರದೇಶಗಳಿಗೆ ವಿದ್ಯುತ್ ಅನ್ನು ಸರಬರಾಜು ಮಾಡಿದ್ದನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಾಗಿ ಟಿಪಿಎಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.
ಅಲ್ಲದೇ ಇದೀಗ ವಿದ್ಯುತ್ ಪೂರೈಕೆಗಾಗಿ ಮತ್ತೆರಡು ಹೊಸ ಗುತ್ತಿಗೆ ಕಂಪೆನಿಗೆ ದೊರೆತಿದ್ದು, 12 ಬಿಲಿಯನ್‌ನಿಂದ 20.5ಬಿಲಿಯನ್ ಯೂನಿಟ್ ವಿದ್ಯುತ್ ಪೂರೈಕೆ ಮಾಡಬೇಕಾಗಿದೆ. ಆಗ್ರಾ ಮತ್ತು ಕಾನ್‌ಪುರ್‌ಗಳಲ್ಲಿ ವಿದ್ಯುತ್ ಪೂರೈಕೆ ಮಾಡುವ ಸಲುವಾಗಿ ಕಳೆದ ಮೂರು ವರ್ಷಗಳಲ್ಲಿ 750ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಟಿಪಿಎಲ್ ಪ್ರಕಟಣೆಯಲ್ಲಿ ಹೇಳಿದೆ. |