ಭಾರತದಲ್ಲಿ ಚಲಾವಣೆಯಾಗುತ್ತಿರುವ ಹವಾಲಾ ಹಣ ನೇರವಾಗಿ ಭಯೋತ್ಪಾದಕರ ಕೈ ಸೇರುತ್ತಿರುವುದಾಗಿ ಅಮೆರಿಕ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಹವಾಲಾ ಹಣ ಭಯೋತ್ಪಾದನೆಗೆ ನೆರವು ನೀಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಫೈನಾಶ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‌ಎಟಿಎಫ್) ಹಾಗೂ ಇಂಟರ್ ಗವರ್ನಮೆಂಟಲ್ ಮಂಡಳಿ ಜೊತೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಅಮೆರಿಕ ಶಿಫಾರಸು ಮಾಡಿದೆ.
ಆ ಕಾರಣಕ್ಕಾಗಿಯೇ ಇತ್ತೀಚೆಗಷ್ಟೇ ನಡೆದ ಸಂಸತ್ ಅಧಿವೇಶನದಲ್ಲಿ ಕಪ್ಪು ಹಣ ತಡೆ ಮಸೂದೆಗೆ ಸಂಸತ್ ಅನುಮೋದನೆ ನೀಡಿರುವುದನ್ನು ಸ್ಮರಿಸಿಕೊಳ್ಳಬಹುದು. ಅಲ್ಲದೇ ಕಪ್ಪು ಹಣ ನಿಗ್ರಹ ತಡೆಗೆ ಭಾರತದ ಸಶಕ್ತವಾದ ಕಾಯ್ದೆಯೊಂದನ್ನು ಜಾರಿಗೆ ತರಬೇಕಾಗಿದೆ ಎಂದು ಅಮೆರಿಕ ಆಗ್ರಹಿಸಿದೆ.
ಭಾರತದಲ್ಲಿ ಈಗಾಗಲೇ ಸಾಕಷ್ಟು ಭಯೋತ್ಪಾದನಾ ದಾಳಿ ನಡೆದಿದೆ, ಆದರೆ ಭಾರತದ ಹವಾಲಾ ಹಣಗಳೆಲ್ಲ ಭಯೋತ್ಪಾದಕರಿಗೆ ನೆರವು ನೀಡಿರುವುದಕ್ಕೆ ನೇರ ಸಂಬಂಧ ಹೊಂದಿದೆ |