ಜಗತ್ತಿನ ಬೃಹತ್ ಪೆಟ್ರೋಲಿಯಮ್ ಲಿಮಿಟೆಡ್ ಸಂಸ್ಥೆಯಾದ ರಿಲಯನ್ಸ್ ಪೆಟ್ರೋಲಿಯ್ ಲಿ.(ಆರ್‌ಪಿಎಲ್) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‌ಐಎಲ್) ಜತೆಗಿನ ವಿಲೀನಕ್ಕೆ ಮುಖೇಶ್ ಅಂಬಾನಿ ಒಡೆತನದ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸುವ ಮೂಲಕ ರಿಲಯನ್ಸ್ ಪೆಟ್ರೋ ಕೆಮಿಕಲ್ ಷೇರುದಾರರಲ್ಲಿ ಭರವಸೆ ಹುಟ್ಟಿಸಿದೆ.ಈ ನೂತನ ವಿಲೀನ ಒಪ್ಪಂದ 2008ರ ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಜಾರಿಯಾಗಲಿದೆ, ಅಲ್ಲದೇ ಈ ಒಪ್ಪಂದ ಬೊಂಬಾಯಿ ಹೈಕೋರ್ಟ್ ತೀರ್ಪಿನಂತೆ ಷೇರುದಾರರಿಗೆ, ಹೂಡಿಕೆದಾರರಿಗೂ ಅನ್ವಯವಾಗಲಿದೆ.ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನೊಂದಿಗೆ ರಿಲಯನ್ಸ್ ಪೆಟ್ರೋಲಿಯಂ ಲಿಮಿಟೆಡ್ ವಿಲೀನವಾದ ಸುದ್ದಿ ಘೋಷಣೆಯಾಗುತ್ತಿದ್ದಂತೆಯೇ ಆರ್‌ಐಎಲ್ ಷೇರಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಆರ್‌ಐಎಲ್ ಹಾಗೂ ಆರ್‌ಪಿಎಲ್ ವಿಲೀನಕ್ಕೆ ಸೋಮವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. |