ದೇಶದ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥಯಾದ ಮಾರುತಿ ಸುಜುಕಿ ಪ್ರಸಕ್ತ ಸಾಲಿನ ಎರಡು ತಿಂಗಳ ಮಾರಾಟದಲ್ಲಿ ಶೇ.24ರಷ್ಟು ಏರಿಕೆ ಕಂಡಿರುವುದಾಗಿ ಸೋಮವಾರ ತಿಳಿಸಿದೆ.
ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಮಾರುತಿ ಸುಜುಕಿ ಮಾರಾಟದಲ್ಲಿ ಕಳೆದ ವರ್ಷದ ಫೆಬ್ರುವರಿಯಲ್ಲಿ 63,822 ಕಾರು ಮಾರಾಟವಾಗಿದ್ದರೆ, 2009ರ ಜನವರಿ ಮತ್ತು ಫೆಬ್ರುವರಿ ತಿಂಗಳಿನಲ್ಲಿ 79, 190 ಕಾರು ಮಾರಾಟವಾಗಿರುವ ಮೂಲಕ ಶೇ.24ರಷ್ಟು ಏರಿಕೆ ಕಂಡಿರುವುದಾಗಿ ವರದಿಯಲ್ಲಿ ಹೇಳಿದೆ.
ಕಳೆದ ತಿಂಗಳ ಮಾರಾಟಕ್ಕಿಂತ ಫೆಬ್ರುವರಿ ತಿಂಗಳಲ್ಲಿಯೇ ಹೆಚ್ಚಳ ಕಂಡಿದೆ ಎಂದು ಮಾರುತಿ ಸುಜುಕಿ ಇಂಡಿಯಾ(ಎಂಎಸ್‌ಐ) ಪ್ರಕಟಣೆಯಲ್ಲಿ ವಿವರಿಸಿದೆ.
ಕಳೆದ ವರ್ಷ ದೇಶಿಯವಾಗಿ ಫೆಬ್ರುವರಿ ತಿಂಗಳಿನಲ್ಲಿ 59, 311 ಕಾರು ಮಾರಾಟವಾಗಿದ್ದು, ಪ್ರಸಕ್ತ ಸಾಲಿನಲ್ಲಿ ನಮ್ಮ ಘಟಕ 70,625 ಮಾರಾಟವಾಗುವ ಮೂಲಕ ಶೇ.19.08ರಷ್ಟು ಏರಿಕೆ ಕಂಡಿದೆ ಎಂದು ಎಂಎಸ್‌ಐ ಹೇಳಿದೆ.
|