ಆರ್‌ಬಿಐನಿಂದ ಬಡ್ಡಿದರ ಕಡಿತದ ನಿರೀಕ್ಷೆಯ ನಡುವೆಯೇ ಆರ್‌ಬಿಐ ಗವರ್ನರ್ ಡಿ.ಸುಬ್ಬರಾವ್ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಆದರೆ ಈ ಭೇಟಿಯ ಉದ್ದೇಶ ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಕುರಿತಾಗಿತ್ತು. ಹಣಕಾಸು ಮಂತ್ರಿಗಳು ಹಾಗೂ ಆರ್‌ಬಿಐ ಗವರ್ನರ್‌ಗಳು ಭಾಗವಹಿಸಲಿರುವ ಶೃಂಗಸಭೆಯ ಪೂರ್ವಭಾವಿ ಭೇಟಿ ಇದಾಗಿದ್ದು, ಹಣಕಾಸು ನೀತಿಗೂ ಏನೂ ಸಂಬಂಧಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಯಾವುದಾದರು ದರ ಕಡಿತದ ಸಂಬಂಧದ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗವರ್ನರ್, ಆ ಪ್ರಶ್ನೆಗೆ ಉತ್ತರ ಕೊಡಲು ನಾನು ಪೂರ್ವ ತಯಾರಿ ನಡೆಸಿಲ್ಲ ಎಂದು ಹೇಳಿದರು. |