ಚೀನಾ ನಿರ್ಮಿತ ಆಟಿಕೆ ಸಾಮಾನುಗಳು ಆಮದು ಮೇಲೆ ಹೇರಿದ್ದ ನಿಷೇಧವನ್ನು ರದ್ದುಗೊಳಿಸಿರುವುದಾಗಿ ಭಾರತ ಸೋಮವಾರ ತಿಳಿಸಿದೆ.
ಈ ಮೊದಲು ಸಾರ್ವಜನಿಕರ ಆರೋಗ್ಯ ಮತ್ತು ರಕ್ಷಣೆಯ ಹಿತದೃಷ್ಟಿಯಿಂದಾಗಿ ಜನವರಿ 23ರಂದು ಚೀನಾದ ಆಟಿಕೆ ಸಾಮಾನುಗಳ ಆಮದಿನ ಮೇಲೆ ಆರು ತಿಂಗಳ ಕಾಲ ನಿಷೇಧ ಹೇರಿತ್ತು.
ಇದೀಗ ಚೀನಾ ಆಟಿಕೆ ವಸ್ತುಗಳ ಮೇಲಿನ ನಿಷೇಧ ರದ್ದುಪಡಿಸಿದ್ದು, ಇನ್ನು ಮುಂದೆ ಆಟಿಕೆಗಳನ್ನು ಆಮದು ಮಾಡಿಕೊಳ್ಳಬಹುದು ಎಂದು ವಾಣಿಜ್ಯ ಸಚಿವಾಲಯ ಸಾರ್ವಜನಿಕ ಪ್ರಕಟಣೆ ನೀಡಿದೆ.
ಆಟಿಕೆ ವಸ್ತುಗಳ ಮೇಲೆ ಭಾರತ ನಿಷೇಧ ಹೇರಿದ ನಿರ್ಧಾರಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಆ ನಿಟ್ಟಿನಲ್ಲಿ ಚೀನಾ ಅಂತಾರಾಷ್ಟ್ರೀಯ ಲ್ಯಾಬೋರೇಟರಿ ಅಕ್ರೆಡೇಶನ್ ಕಾರ್ಪೋರೆಶನ್ ಶಿಫಾರಸ್ಸಿನ ಮೇರೆಗೆ ಭಾರತಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಆಟಿಕೆ ವಸ್ತುಗಳ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ. |