ಕೋಟ್ಯಾಧೀಶ್ವರ ಎನ್‌ಆರ್‌ಐ ಅನಿಲ್ ಅಗರ್‌ವಾಲ್ ನೇತೃತ್ವದ ವೇದಾಂತ ಗ್ರೂಪ್ ಭಾರತದಲ್ಲಿ 2011-12ರಲ್ಲಿ ಸುಮಾರು 70 ಸಾವಿರ ಕೋಟಿ ರೂ.ಗಳಷ್ಟು ಹೂಡಿಕೆ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ.
ನಾವು ಅಲ್ಯುಮಿನಿಯಮ್ ಸೆಕ್ಟರ್‌ನಲ್ಲಿ 50ಸಾವಿರ ಕೋಟಿ ರೂ.ಹೂಡಲು ನಿರ್ಧರಿಸಿದ್ದು, ಅದರಂತೆ ತಾಮ್ರ, ಕಬ್ಬಿಣ ಹಾಗೂ ಜಿಂಕ್ ಸೆಕ್ಟರ್‌ಗಳಲ್ಲಿ 20ಸಾವಿರ ಕೋಟಿ ರೂ.ಗಳಷ್ಟು ಭಾರತದಲ್ಲಿ 2011-12ರಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ವೇದಾಂತ ಗ್ರೂಪ್‌ನ ಅಧ್ಯಕ್ಷ ಅನಿಲ್ ಅಗರ್‌ವಾಲ್ ಹೇಳಿದರು.
ಈ ಎಲ್ಲಾ ಹೂಡಿಕೆಯಲ್ಲಿ ಕಂಪೆನಿ ಶೇ.50ರಷ್ಟು ಹಾಗೂ ಇನ್ನುಳಿದ ಹಣವನ್ನು ಉಳಿದ ಕಂಪೆನಿಗಳೊಂದಿಗಿನ ಒಪ್ಪಂದದೊಂದಿಗೆ ಭರಿಸಲಾಗುವುದು ಎಂದು ಅವರು ತಿಳಿಸಿದರು.
ಜಾಗತಿಕ ಆರ್ಥಿಕ ಹಿಂಜರಿತ ತೊಂದರೆ ಏನಾದರು ಬಾಧಿಸಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಯನ್ನು ತಳ್ಳಿಹಾಕಿದ ಅವರು, ಹೂಡಿಕೆ ವಿಷಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇಲ್ಲ ಎಂದು ಅಗರ್‌ವಾಲ್ ಸ್ಪಷ್ಟಪಡಿಸಿದರು. |