ಪೆರ್ಥ್: ತೈಲ ಬೆಲೆ ಸೋಮವಾರ ಮತ್ತೆ ಬ್ಯಾರೆಲ್‌ವೊಂದಕ್ಕೆ 44ಡಾಲರ್‌ಕ್ಕಿಂತ ಕೆಳಗಿಳಿದಿದ್ದು, ಜಾಗತಿಕವಾಗಿ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವುದರಿಂದ ಈ ಇಳಿಕೆ ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಜಗತ್ತಿನಲ್ಲಿಯೇ ಪೆಟ್ರೋಲಿಯಂ ಉತ್ಪನ್ನದಲ್ಲಿ ಎರಡನೇ ದೊಡ್ಡ ದೇಶವಾಗಿರುವ ಇರಾನ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಪೆಟ್ರೋಲಿಯಂ ಉತ್ಪನ್ನ ಸಂಘಟನೆ ಮತ್ತೆ ಸಭೆ ಸೇರಿ ದರ ಇಳಿಕೆ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇರುವುದಾಗಿ ಹೇಳಿದೆ. |