ಅಮೆರಿಕದ ಡಾಲರ್, ಯುರೋ, ಜಪಾನ್‌ನ ಯೆನ್‌ಗಳ ಚಿಹ್ನೆ ಹಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಲಭವಾಗಿ ಗುರುತಿಸುವ ನಿಟ್ಟಿನಲ್ಲಿ ಭಾರತದ ರೂಪಾಯಿಗೂ ಚಿಹ್ನೆಯೊಂದನ್ನು ಸಾರ್ವಜನಿಕರು ಸೂಚಿಸಿ ಸುಮಾರು 2.5ಲಕ್ಷ ರೂ.ಗಳ ಬಹುಮಾನ ಪಡೆಯುವಂತೆ ಭಾರತ ಸರಕಾರ ಘೋಷಿಸಿದೆ.ಡಾಲರ್‌ನ $, ಯೆನ್‌ನ ¥ ಚಿಹ್ನೆಯಂತೆ ಭಾರತದ ರೂಪಾಯಿಗೂ ನೂತನ ಚಿಹ್ನೆಯನ್ನು ಸೂಚಿಸುವಂತೆ ಸಾರ್ವಜನಿಕರಿಂದ ಸಲಹೆಯನ್ನು ಭಾರತದ ವಿತ್ತ ಸಚಿವಾಲಯ ಆಹ್ವಾನಿಸಿದ್ದು, ಅದಕ್ಕಾಗಿ ವಿಶೇಷ ಬಹುಮಾನವನ್ನೂ ಇಟ್ಟಿದೆ.ಐತಿಹಾಸಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ದೇಶಾದ್ಯಂತ ಸಾರ್ವತ್ರಿಕವಾಗಿ ಒಪ್ಪುವ ನಿಟ್ಟಿನಲ್ಲಿ ಆ ಚಿಹ್ನೆ ಇರಬೇಕು ಎಂದು ವಿತ್ತ ಸಚಿವಾಲಯ ವಿವರಿಸಿದೆ. ಅಲ್ಲದೇ ಅದು ಭಾರತೀಯ ರಾಷ್ಟ್ರೀಯ ಭಾಷೆಗೂ ಅನ್ವಯವಾಗಿರಬೇಕು ಅದರಂತೆ ಚಿಹ್ನೆ ಕೂಡ ಎಂದು ಹೇಳಿದೆ.ಸಾರ್ವಜನಿಕರಿಂದ ಆಹ್ವಾನಿಸಿರುವ ಚಿಹ್ನೆಯು ಏಪ್ರಿಲ್ 15ರೊಳಗೆ ಕಳುಹಿಸುವಂತೆ ಅಂತಿಮ ದಿನಾಂಕ ನಿಗದಿಗೊಳಿಸಿದೆ. ಅದನ್ನು ಪ್ರತಿಷ್ಠಿತ ಸಂಸ್ಥೆ ಹಾಗೂ ಸರಕಾರ, ಆರ್‌ಬಿಐನ ಇಬ್ಬರು ಸೇರಿದಂತೆ ಮೂರು ಮಂದಿ ಸದಸ್ಯರ ತಂಡ ಪರಿಶೀಲನೆ ನಡೆಸಿ ಆಯ್ಕೆ ಮಾಡಲಿದೆ. ಉತ್ತಮವಾದ ಚಿಹ್ನೆಯನ್ನು ಸೂಚಿಸಿ ಗೆಲುವ ಸಾಧಿಸುವ ವಿಜೇತರಿಗೆ 2.5ಲಕ್ಷ ನಗದು ಹಣ ಪಡೆಯಲಿದ್ದಾರೆ. ಹಾಗೆಯೇ ಆಯ್ಕೆಯಾಗುವ ಚಿಹ್ನೆ ಭಾರತದ ಸರಕಾರದ ಖಾಯಂ ಆಸ್ತಿಯಾಗಲಿದೆ ಎಂದು ಹೇಳಿದೆ. |