ಅಮೆರಿಕದ ಆರ್ಥಿಕ ಹಿಂಜರಿತ ಹಾಗೂ ಸೋಮವಾರ ರಾತ್ರಿ ಶೇರು ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಂಡ ಪರಿಣಾಮ ಮಂಗಳವಾರ ಏಷ್ಯಾದ ತೈಲ ಬೆಲೆ ಬ್ಯಾರೆಲ್‌ವೊಂದಕ್ಕೆ 40ಡಾಲರ್‌ಗೆ ಇಳಿಕೆ ಕಂಡಿದೆ.
ಸೋಮವಾರವಷ್ಟೇ ತೈಲ ಬೆಲೆ ಮಾರುಕಟ್ಟೆಯಲ್ಲಿ ಶೇ.2ರಷ್ಟು ಇಳಿಕೆ ಕಂಡಿದ್ದು, ಪೆಟ್ರೋಲಿಯಂ ಉತ್ಪನ್ನಗಳಲ್ಲಿನ ಬೆಲೆಯನ್ನು ಮತ್ತಷ್ಟು ಇಳಿಸಬೇಕಾದ ಅನಿರ್ವಾಯತೆ ಎದುರಾಗಿದೆ ಎಂದು ಇರಾನ್ ತಿಳಿಸಿತ್ತು.
ಇದೀಗ ಸಿಂಗಾಪುರ್, ನ್ಯೂಯಾರ್ಕ್‌ನಲ್ಲಿ ಬ್ಯಾರೆಲ್‌ವೊಂದಕ್ಕೆ 40.43ಯು.ಎಸ್.ಡಾಲರ್ ಆಗಿರುವುದಾಗಿ ತಿಳಿಸಿದ್ದು, ಇದು ಭಾರೀ ಇಳಿಕೆಯನ್ನು ಕಂಡಂತಾಗಿದೆ ಎಂದು ತೈಲೋತ್ಪನ್ನ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.
ಸೋಮವಾರ 4.62ಡಾಲರ್ ಇಳಿಕೆ ಕಂಡು ಬ್ಯಾರಲ್‌ಗೆ 40.15ಡಾಲರ್ ಬೆಲೆ ಆಗಿತ್ತು ಎಂದು ಅಮೆರಿಕನ್ ಇಂಟರ್‌ನ್ಯಾಷನಲ್ ಗ್ರೂಪ್ ವಿವರಿಸಿದೆ. ಆ ನಿಟ್ಟಿನಲ್ಲಿ ನಾಲ್ಕನೇ ತ್ರೈಮಾಸಿಕ ಲೆಕ್ಕಚಾರದಲ್ಲಿ 16.7ಬಿಲಿಯನ್ ಡಾಲರ್ ನಷ್ಟ ಹೊಂದಿರುವುದಾಗಿ ಹೇಳಿದೆ. ಇದು ಅಮೆರಿಕ ಕಾರ್ಪೋರೇಟ್ ಇತಿಹಾಸದಲ್ಲೇ ಭಾರೀ ನಷ್ಟ ಕಂಡ ಉದಾಹರಣೆಯಾಗಿದೆ ಎಂದು ತಿಳಿಸಿದೆ. |