ದೇಶದ ಪ್ರತಿಷ್ಠಿತ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಠೇವಣಿ ಬಡ್ಡಿದರವನ್ನು 0.5ರಷ್ಟು ಇಳಿಕೆ ಮಾಡಿದ್ದು, ಐಡಿಐಬಿ ಬ್ಯಾಂಕ್ ಕೂಡ ತನ್ನ ಗೃಹಸಾಲದಲ್ಲಿ ಶೇ. ಒಂದು ಪಾಯಿಂಟ್ ಕಡಿತ ಮಾಡಿದೆ.
ಅಲ್ಲದೇ ಐಡಿಬಿಐ ಕೂಡ ತನ್ನ ಠೇವಣಿ ಬಡ್ಡಿದರದಲ್ಲಿಯೂ 0.5ರಷ್ಟು ಕಡಿತಗೊಳಿಸಿರುವುದಾಗಿ ಹೇಳಿದೆ. ಸರಕಾರ ಘೋಷಿಸಿರುವ ಪ್ಯಾಕೇಜ್‌ನಿಂದಾಗಿ ಮುಂದಿನ ದಿನಗಳಲ್ಲಿ ಗೃಹ ಸಾಲದ ಬೇಡಿಕೆ ಹೆಚ್ಚಳಗೊಳ್ಳಲಿದೆ ಎಂಬ ಭರವಸೆ ಹೊಂದಿರುವುದಾಗಿ ಐಡಿಐಬಿ ಬ್ಯಾಂಕ್ ವರಿಷ್ಠರಾದ ಸಿ.ಎಸ್.ಜೈನ್ ತಿಳಿಸಿದರು.
ದೇಶದಲ್ಲಿ ಮೂರನೇ ದೊಡ್ಡ ಬ್ಯಾಂಕ್ ಆಗಿರುವ ಐಡಿಬಿಐ, ಈ ದರ ಕಡಿತದೊಂದಿಗೆ ತಮ್ಮ ವಹಿವಾಟನ್ನು ಮತ್ತಷ್ಟು ವೃದ್ದಿಗೊಳಿಸುವ ವಿಶ್ವಾಸ ಹೊಂದಿರುವುದಾಗಿ ಹೇಳಿದರು.
ಗೃಹ ಸಾಲವನ್ನು 20ಲಕ್ಷ ರೂಪಾಯಿಗಳವರೆಗೆ ನೀಡಲು ನಿರ್ಧರಿಸಲಾಗಿದ್ದು, ಅದಕ್ಕೆ ಶೇ. 0.5ರಷ್ಟು ಬಡ್ಡಿದರ ಇಳಿಕೆ ಅನ್ವಯವಾಗಲಿದೆ ಎಂದು ಐಡಿಬಿಐ ವಿವರಿಸಿದೆ. |