ಉದ್ಯಮ ವಲಯದಲ್ಲಿ ಕುಸಿತ ಇರುವಾಗಲೇ ತಮ್ಮ ಲಕ್ಷುರಿ ಕಾರು ತಯಾರಿಸುವ ವೋಕ್ಸ್ವೇಗನ್ ಸಂಸ್ಥೆ ಇದೀಗ ಜನಸಾಮಾನ್ಯರ ಕಾರು `ಬೀಟಲ್'ನ್ನು ಅಕ್ಟೋಬರ್ ತಿಂಗಳಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇನ್ನೊಂದು ಕಾರು 'ಪೋಲೋ' 2010ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ವೋಕ್ಸ್‌ವೇಗನ್ ಸಂಸ್ಥೆ 3,600 ಕೋಟಿ ರುಪಾಯಿಗಳನ್ನು ತನ್ನ ಪೂನಾ ಪ್ಲಾಂಟ್‌ಗೆ ಹೆಚ್ಚುವರಿಯಾಗಿ ಹೂಡಲು ನಿರ್ಧರಿಸಿದ್ದು, ಸಂಸ್ಥೆಯ ಇಂಡಿಯಾ ಪ್ರಾಜೆಕ್ಟ್‌ನ ಮುಖ್ಯಸ್ಥ ಲುಡ್‌ವಿಗ್ ಗೀರ್ಕೆನ್ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಈ ಜನಸಾಮಾನ್ಯರ ಬೀಟಲ್ ಕಾರು ಹೊರಬರಲಿದೆ. ಅಲ್ಲದೆ, ಇದಕ್ಕಾಗಿ ಭಾರತದಲ್ಲಿ 3,600 ಕೋಟಿ ರುಪಾಯಿಗಳ ಬಂಡವಾಳ ಹೂಡಿಕೆ ನಿರ್ಧಾರವನ್ನು ಯಾವುದೇ ಕಾರಣ್ಕಕೆ ಹಿಂತೆಗೆಯಲು ಸಾಧ್ಯವಿಲ್ಲ ಎಂದರು.
ಪೋಲೋ ಕಾರು ಉತ್ಪಾದನಾ ಪ್ರಕ್ರಿಯೆ 2010ರ ಜನವರಿ ತಿಂಗಳಲ್ಲಿ ಆರಂಭವಾಗಲಿದ್ದು, ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಉತ್ಪಾದನೆಯನ್ನು ಸ್ವಲ್ಪ ಬೇಗನೆ ಆರಂಭಿಸುವುದರಿಂದ ಡೀಲರ್‌ಗಳ ಮೂಲಕ ಇದಕ್ಕಾಗಿ ಹೂಡಿಕೆ ಮಾಡುವವರಿಗೆ ಅನುಕೂಲವಾಗಬಹುದು ಎಂದರು. ಪೋಲೋ ಕಾರನ್ನು ಪೂನಾದ ಪ್ಲಾಂಟ್‌ನಲ್ಲಿ ತಯಾರಿಸಲಾಗುತ್ತಿದ್ದು, ಈ ಕಾರಿನ ಬೆಲೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ, ಭಾರತದ ಇತರ ಕಾರುಗಳೊಂದಿಗೆ ಸ್ಪರ್ಧಿಸುವ ಬೆಲೆಯನ್ನು ಇದು ಹೊಂದಿರುತ್ತದೆ ಎಂದು ಗೀರ್ಕೆನ್ ತಿಳಿಸಿದರು. |