ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಪ್ರಸಕ್ತ 2009ನೇ ಸಾಲಿನಲ್ಲಿ ಭಾರತ ಆರ್ಥಿಕ ಸ್ಥಿತಿ ಮತ್ತಷ್ಟು ಕಠಿಣವಾಗಲಿದೆ ಎಂದು ಆರ್ಥಿಕ ತಜ್ಞೆ ಮೂಡೆಸ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಆರ್ಥಿಕ ಹಿಂಜರಿತವನ್ನು ನಿಭಾಯಿಸಲು ಒಂದು ವರ್ಷ ಬೇಕಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸರಕಾರ ಆರ್ಥಿಕ ಹಿಂಜರಿತಕ್ಕೆ ಪೂರಕ ಎಂಬಂತೆ ಉತ್ತೇಜಕ ಪ್ಯಾಕೇಜ್ ಅನ್ನು ಘೋಷಿಸಿದರೂ ಕೂಡ ಆರ್ಥಿಕ ಹೊಡೆತ ಶೀಘ್ರವೇ ಚೇತರಿಕೆ ಕಾಣಲಿದೆ ಎಂಬ ಕುರಿತಾಗಿ ತಾನು ಆಲೋಚಿಸಿಲ್ಲ ಎಂದು ತಿಳಿಸಿರುವ ಅವರು, ಆದರೆ ಹೆಚ್ಚಿನ ಹಿಂಜರಿತವನ್ನು ತಡೆಯಲು ಅದರಿಂದ ಸಹಾಯಕವಾಗಲಿದೆ ಎಂದು ಹೇಳಿದರು.
ಆ ನಿಟ್ಟಿನಲ್ಲಿ ಭಾರತ 2010ರ ಮಾರ್ಚ್ ವೇಳೆಗೆ ಆರ್ಥಿಕ ಚೇತರಿಕೆ ಕಂಡುಕೊಳ್ಳುವ ಸಾಧ್ಯತೆ ಇರುವುದಾಗಿ ಆರ್ಥಿಕ ತಜ್ಞೆ ಮೂಡೆಸ್ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಇಕಾನಮಿ ಡಾಟ್ ಕಾಮ್‌ನ ಶೆರ್ಮಾನ್ ಚಾನ್ ಅವರು ಸಿಡ್ನಿಯಲ್ಲಿ ಹೇಳಿದ್ದಾರೆ.
ಕಳೆದ ವರ್ಷಕ್ಕಿಂತ 2009 ಭಾರತ ಕಠಿಣ ಸವಾಲು ಎದುರಿಸಬೇಕಾಗಲಿದೆ, ಆ ನಿಟ್ಟಿನಲ್ಲಿ 2010ರೊಳಗೆ ಸಶಕ್ತವಾಗಲು ತುಂಬಾ ಕಠಿಣವಾಗಲಿದೆ ಎಂದು ತಿಳಿಸಿದರು. |