ಜಾಗತಿಕವಾಗಿ ಕಂಗೆಡಿಸಿರುವ ಆರ್ಥಿಕ ಹೊಡೆತದ ಬಿಸಿ ನ್ಯೂಯಾರ್ಕ್‌ಗೂ ತಟ್ಟಿದ್ದು, ಬಾಡಿಗೆ ದರ ಏರಿಕೆ, ಉದ್ಯೋಗದ ಅವಕಾಶ ಕಡಿಮೆ, ವಿದ್ಯಾಭ್ಯಾಸ ನೀಡುವುದು ಹೆಚ್ಚು ಖರ್ಚು ಎಂಬ ಸ್ಥಿತಿ ನಿರ್ಮಾಣಗೊಂಡಿರುವುದಾಗಿ ನೂತನ ಸಮೀಕ್ಷಾ ವರದಿಯೊಂದು ತಿಳಿಸಿದೆ.
2006ರಲ್ಲಿ ಸುಮಾರು 150,00ರಷ್ಟು ಮಧ್ಯಮ ವರ್ಗದ ಜನರು ಅಧಿಕ ವೆಚ್ಚವನ್ನು ಭರಿಸಲಾಗದೆ ನ್ಯೂಯಾರ್ಕ್ ತೊರೆದು ಹೋಗಿರುವುದಾಗಿ ವರದಿ ಹೇಳಿದೆ.
ನೆರೈಡಾ ಗಾರ್ಸಿಯಾ ಎಂಬಾಕೆ ತಮ್ಮ ಜೀವಿತ ಬಹುಭಾಗವನ್ನು ನ್ಯೂಯಾರ್ಕ್‌ನ ಸಿಂಗಲ್ ಬೆಡ್‌ರೂಂ ಅಪಾರ್ಟ್‌ಮೆಂಟ್‌ವೊಂದರಲ್ಲಿ ಲ್ಲಿಯೇ ಕಳೆದಿದ್ದರು, ಆದರೆ ಆರ್ಥಿಕ ಹಿಂಜರಿತದ ಹೊಡೆತದ ಪರಿಣಾಮ, ನ್ಯೂಯಾರ್ಕ್ ಬಿಡುವಂತಾಗಿದ್ದು, ಗಂಟುಮೂಟೆ ಕಟ್ಟಿಕೊಂಡು ಪ್ಲೋರಿಡಾದಲ್ಲಿರುವ ತಮ್ಮ ಪೋಷಕರೊಂದಿಗೆ ವಾಸ್ತವ್ಯ ಹೂಡುವಂತಾಗಿದೆ.
ಇದರಿಂದ ತಾನು ಕಂಗೆಟ್ಟಿರುವುದಾಗಿ ತಿಳಿಸಿರುವ ಗಾರ್ಸಿಯಾ, ತನಗೆ ನ್ಯೂಯಾರ್ಕ್ ತೊರೆಯಲು ಇಷ್ಟವಿರಲಿಲ್ಲ. ಯಾಕೆಂದರೆ ಅದು ನನ್ನ ಮನೆ, ನನ್ನ ಹೃದಯವೇ ಅಲ್ಲಿತ್ತು, ಆದರೇನು ಮಾಡುವುದು ಅನಿವಾರ್ಯವಾಗಿ ಹೊರಬರಲೇಬೇಕಾಯಿತು ಎಂಬುದು ಆಕೆಯ ಅಳಲು.
ನ್ಯೂಯಾರ್ಕ್‌ನಲ್ಲಿ ವಾಸ್ತವ್ಯ ಹೂಡುವುದೆಂದರೆ ಅತ್ಯಂತ ವೆಚ್ಚದಾಯಕ, ತಿಂಗಳ ಬಾಡಿಗೆ ಶೇ.53ರಷ್ಟು ಹೆಚ್ಚು, ನಂತರದ ವೆಚ್ಚದಾಯಕ ನಗರವೆಂದರೆ ಸ್ಯಾನ್ ಫ್ರಾನ್ಸಿಸ್ಕೋ. |