ಜಾಗತಿಕವಾಗಿ ಆರ್ಥಿಕ ಹಿಂಜರಿತದಿಂದ ಕೆಂಗೆಟ್ಟಿರುವ ನಡುವೆಯೂ ಸತ್ಯಂ ಮಹಾವಂಚನೆ ಹಾಗೂ ವಾಣಿಜ್ಯ ನಗರಿ ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯಿಂದಾಗಿ ಭಾರತ ಹೊರಗುತ್ತಿಗೆಯಲ್ಲಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ ಎಂದು ಅಮೆರಿಕ ತಿಳಿಸಿದೆ.
ಭಾರತದಲ್ಲಿನ ಸತ್ಯಂ, ಭಯೋತ್ಪಾದನಾ ದಾಳಿ ಹಾಗೂ ಚೀನಾದಲ್ಲಿನ ಶಿಪ್ಪಿಂಗ್ ಕಾಸ್ಟ್ ವಿವಾದದಿಂದಾಗಿ ಸಾಂಪ್ರದಾಯಿಕ ಔಟ್ ಸೋರ್ಸಿಂಗ್ ರಾಷ್ಟ್ರಗಳಾದ ಭಾರತ ಮತ್ತು ಚೀನಾದಲ್ಲಿ ಅಮೆರಿಕದ ಟೆಕ್ನೋಲಾಜಿ ಕಂಪೆನಿಗಳು ಗುತ್ತಿಗೆ ಪಡೆದುಕೊಳ್ಳುವ ನಿರ್ಧಾರದಿಂದ ಹಿಂದಕ್ಕೆ ಸರಿದಿರುವುದಾಗಿ ಹೇಳಿದೆ.
ಆ ನೆಲೆಯಲ್ಲಿ ಅಮೆರಿಕದ ಕೆಲವು ಟೆಕ್ನಾಲಜಿ ಕಂಪೆನಿಗಳು ಮುಂದಿನ ದಿನಗಳಲ್ಲಿ ಭಾರತ ಮತ್ತು ಚೀನಾ ಹೊರತುಪಡಿಸಿ ಅಮೆರಿಕದ ಕಂಪೆನಿಗಳನ್ನೇ ನೆಚ್ಚಿಕೊಂಡಿರುವುದಾಗಿ ಬಿಡಿಓ ಸಿಯೆಡ್‌ಮನ್ ಹಾಗೂ ಅಮೆರಿಕದ ಪ್ರತಿಷ್ಠಿತ ಲೆಕ್ಕಪರಿಶೋಧಕ ಕಂಪೆನಿಯಾದ ಎಲ್‌ಎಲ್‌ಪಿ ಸಂಘಟನೆಗಳ ವಾರ್ಷಿಕ ಸಮೀಕ್ಷಾ ವರದಿ ಈ ಅಂಶವನ್ನು ಬಹಿರಂಗಪಡಿಸಿದೆ.
ಕಳೆದ ವರ್ಷಕ್ಕಿಂತ 2009ರಲ್ಲಿ ಹೊರಗುತ್ತಿಗೆ ಪಡೆಯುವಲ್ಲಿ ಭಾರತ ಗಣನೀಯವಾಗಿ ಬೇಡಿಕೆಯಲ್ಲಿ ಇಳಿಕೆ ಕಾಣಲಿದೆ, ಆ ನಿಟ್ಟಿನಲ್ಲಿ ಅವಕಾಶವನ್ನು ಅಮೆರಿಕ ಪಡೆಯಲಿದೆ ಎಂದು ಬಿಡಿಓ ಸಿಯೆಡ್ ಮನ್ ಟೆಕ್ನೋಲಜಿಯ ದೌಗ್ಲಾಸ್ ಸಿರೋಟ್ಟಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |