ಮುಂಬೈ ಹಾಗೂ ಲಕ್ನೋ ಮಾರ್ಗವಾಗಿ ನೂತನ ವಿಮಾನ ಸಂಚಾರವನ್ನು ಆರಂಭಿಸುವುದಾಗಿ ಜೆಟ್ ಏರ್‌ವೇಸ್ ಬುಧವಾರ ಘೋಷಿಸಿದೆ.
ಪ್ರತಿಷ್ಠಿತ ಜೆಟ್ ಏರ್‌ವೇಸ್ ಮುಂಬೈ ಮತ್ತು ಲಕ್ನೋ ಮಾರ್ಗವಾಗಿ ನೂತನವಾಗಿ ಬೋಯಿಂಗ್ 737 ವಿಮಾನ ಸಂಚಾರ ಆರಂಭಿಸುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಈ ವಿಮಾನದಲ್ಲಿ ಇಕಾನಮಿ ಮತ್ತು ಪ್ರೀಮಿಯರ್ ದರ್ಜೆ ಹೊಂದಿರುವುದಾಗಿ ಹೇಳಿದೆ.
ನೂತನವಾಗಿ ಆರಂಭಿಸಲಿರುವ ಈ ವಿಮಾನ ಸಂಚಾರದಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ನಂಬಿಕೆ ಕಂಪೆನಿಯದ್ದಾಗಿದೆ ಎಂದು ಜೆಟ್ ಏರ್‌ವೇಸ್ ಸಿಇಒ ವೋಲ್ಫ್‌ಗಾಂಗ್ ಪ್ರೋಕ್‌ಶ್ಚುವರ್ ತಿಳಿಸಿದ್ದಾರೆ.
ಜೆಟ್ ಏರ್‌ವೇಸ್‌ನ 9ಡಬ್ಲ್ಯು 665 ವಿಮಾನ 11ಗಂಟೆಗೆ ಮುಂಬೈಗೆ ಆಗಮಿಸಲಿದ್ದು, ಲಕ್ನೋಗೆ ಮಧ್ನಾಹ್ನ 1.20ಕ್ಕೆ ತಲುಪಲಿದೆ. ಹಾಗೆಯೇ 9ಡಬ್ಲ್ಯು 666 ವಿಮಾನ ಲಕ್ನೋಗೆ ಮಧ್ನಾಹ್ನ 1.50ಕ್ಕೆ ಬರಲಿದ್ದು, ಮುಂಬೈಗೆ 4ಗಂಟೆಗೆ ತಲುಪಲಿದೆ ಎಂದು ವಿವರಿಸಿದೆ. |