ವಿದೇಶಿ ನೇರ ಹೂಡಿಕೆಯ 29 ಪ್ರಸ್ತಾಪಗಳಿಗೆ ಭಾರತ ಸರಕಾರ ಬುಧವಾರ ಅಂಕಿತ ಹಾಕುವ ಮೂಲಕ, ಇದರಿಂದಾಗಿ ದೇಶಕ್ಕೆ ಸುಮಾರು 616.08ಕೋಟಿ ರೂಪಾಯಿ ಹರಿದು ಬರಲಿದೆ.
ಇಂದು ಗ್ರೀನ್ ಸಿಗ್ನಲ್ ದೊರೆತಿರುವ 29 ಪ್ರಸ್ತಾಪಗಳಲ್ಲಿ ಸಿಂಗಾಪುರದ ಎಎಪಿಸಿ ಭಾರತದಲ್ಲಿ 365.78ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಲಿದ್ದು, ಈ ಪ್ರಸ್ತಾಪಕ್ಕೆ ಫಾರೆನ್ ಇನ್ವೆಸ್ಟ್‌ಮೆಂಟ್ ಪ್ರೋಮೋಷನ್ ಬೋರ್ಡ್ (ಎಫ್‌ಐಪಿಬಿ) ಅಂಕಿತ ಹಾಕಿದೆ.
ಅದೇ ರೀತಿ ಎಬಿಜಿ ಬಲ್ಕ್ ಹ್ಯಾಡ್ಲಿಂಗ್ ಕೂಡ ಭಾರತದಲ್ಲಿ 90ಕೋಟಿ ರೂ.ಗಳಷ್ಟು, ತೆಲ್‌ಕೋರ್ಡಿಯಾ ಟೆಕ್ನೋಲಜಿ 45ಕೋಟಿ ರೂ.ಗಳಷ್ಟು ಹೂಡಿಕೆ ಮಾಡಲಿದೆ.
29 ಪ್ರಸ್ತಾಪಗಳಲ್ಲಿ ಸಿನಿಮಾ ಕ್ಯಾಪಿಟಲ್ ವೆಂಚರ್ ಕೂಡ ಸೇರಿದ್ದು, ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲೂ ಅಂದಾಜು 50ಕೋಟಿ ರೂ.ಗಳಷ್ಟು ಹೂಡಿಕೆಗೂ ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದು ಕೇಂದ್ರ ತಿಳಿಸಿದೆ. |