ಮೈಕ್ರೋಸಾಪ್ಟ್‌ನಿಂದ ಐದು ಸಾವಿರ ಮಂದಿ ನೌಕರರನ್ನು ವಜಾಗೊಳಿಸಿರುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದು, ಅದರಲ್ಲಿ ಎಚ್-1ಬಿ ವೀಸಾ ಹೋಲ್ಡರ್‌ಗೂ ಕೂಡ ಪಿಂಕ್ ಸ್ಲಿಪ್ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದು, ಎಚ್-1ಬಿ ವೀಸಾದಾರರು ಕಂಪೆನಿಯ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡಿರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದೆ.
ಆದರೆ ಎಚ್-1ಬಿ ಕೆಲಸದ ವೀಸಾಕ್ಕೆ ಜಗತ್ತಿನ ವಿವಿಧೆಡೆ ತುಂಬಾ ಅವಕಾಶಗಳಿವೆ ಎಂದು ಸೆನೆಟರ್ ಚಾರ್ಲ್ಸ್ ಗ್ರಾಸ್ಲೇ ಅವರಿಗೆ ಮೈಕ್ರೋಸಾಫ್ಟ್ ಬರೆದಿರುವ ಪತ್ರದಲ್ಲಿ ವಿವರಿಸಿದೆ. ಸರ್ಕಾರದಿಂದ ಉತ್ತೇಜಕ ನೆರವು ಪಡೆಯುವ ಬ್ಯಾಂಕ್‌ಗಳು ಮತ್ತು ಕಂಪೆನಿಗಳು ಆರ್ಥಿಕ ಹಿಂಜರಿತದ ಸಮಯದಲ್ಲಿ ಹೊರಕಳುಹಿಸಿದ್ದ ಎಚ್‌ಡಿ-ಬಿ ವೀಸಾ ಹೊಂದಿದ ವ್ಯಕ್ತಿಗಳನ್ನು ಅಮೆರಿಕನ್ನರ ಸ್ಥಾನದಲ್ಲಿ ನೇಮಿಸಿಕೊಳ್ಳುವಂತಿಲ್ಲ ಎಂದು ಅಮೆರಿಕನ್ ಕಾಂಗ್ರೆಸ್ ಇತ್ತೀಚೆಗೆ ನಿಷೇಧ ವಿಧಿಸಿತ್ತು.
ಇದರಿಂದ ಭಾರತೀಯ ಐಟಿ ವೃತ್ತಿಪರರಿಗೆ ಭಾರೀ ಹೊಡೆತ ಬಿದ್ದಂತಾಗಿತ್ತು. ಈ ಕ್ರಮವನ್ನು ಈ ಹಿಂದೆ ವಿರೋಧಿಸಿದ್ದ ಅಮೆರಿಕ ವಕೀಲರ ಸಂಘ ಈ ಕ್ರಮ ನಿರಾಶಾದಾಯಕ ಎಂದು ಶುಕ್ರವಾರ ವಿಷಾದ ವ್ಯಕ್ತಪಡಿಸಿತ್ತು.
ಈ ಕ್ರಮದಿಂದ ಅಮೆರಿಕದ ಕಂಪೆನಿಗಳು ಅತ್ಯುನ್ನತ ಜಾಗತಿಕ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ತೊಡಕುವುಂಟಾಗುವುದರಿಂದ ಉತ್ಪಾದಕರಿಗೆ ಹೊಡೆತ ಬೀಳಲಿದೆ ಎಂದು ಅದು ವಾದಿಸಿತ್ತು. ಎಚ್-1ಬಿ ವೀಸಾ ಭಾರತೀಯ ತಂತ್ರಜ್ಞಾನ ಪದವೀಧರರಿಗೆ ಪ್ರಯೋಜನ ಒದಗಿಸುತ್ತಿತ್ತು. |