ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಮತ್ತೆ ರೆಪೋ ದರದಲ್ಲಿ ಶೇ.50ಬೇಸ್ ಪಾಯಿಂಟ್ (ಶೇ.5)ಗಳಷ್ಟು ಕಡಿತ ಮಾಡಿರುವುದಾಗಿ ಬುಧವಾರ ಘೋಷಿಸಿದೆ.
ಜಾಗತಿಕ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿತ್ತು. ಆ ಸಂದರ್ಭದಲ್ಲಿ ಶೇ.9ರಷ್ಟು ರೆಪೋ ದರವನ್ನು ಕಡಿತ ಮಾಡಿದ್ದು, ಇದೀಗ ಮತ್ತೆ ಶೇ.5ರಷ್ಟು ಕಡಿತ ಮಾಡಿದೆ.
ಬ್ಯಾಂಕ್‌ಗಳಲ್ಲಿನ ಸಾಲ ಪ್ರಮಾಣ ಹೆಚ್ಚಲು ಹಾಗೂ ಮತ್ತಷ್ಟು ಆರ್ಥಿಕ ಚೇತರಿಕೆ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಆರ್‌ಬಿಐ ತಿಳಿಸಿದೆ.
ರೆಪೋ ದರವನ್ನು ಕಡಿತಗೊಳಿಸುವ ಬಗ್ಗೆ ಫೆಬ್ರುವರಿ ತಿಂಗಳಿನಲ್ಲಿಯೇ ಪ್ರಧಾನಮಂತ್ರಿ ಸಲಹಾ ಸಮಿತಿ ಮುನ್ಸೂಚನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಇದೀಗ ಆರ್‌ಬಿಐ ರೆಪೋ ದರ ಕಡಿತಕ್ಕೆ ಮುಂದಾಗಿದೆ. |