ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತಕ್ಕೆ ಹೆಚ್ಚು ಮೈಲೇಜ್ ನೀಡುವ ಕಾರುಗಳ ಲಗ್ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ಹೆಚ್ಚು ಮೈಲೇಜ್ ನೀಡುವ ಕಾರುಗಳ ಲಗ್ಗೆ
ಇನ್ನು ಕೆಲವೇ ಸಮಯದಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಕೆಲವು ತಾಂತ್ರಿಕ ಸುಧಾರಣೆಗಳಿಂದ ಇದು ಸಾಧ್ಯವಾಗಲಿದ್ದು, ಅಂತಹ ಕಾರುಗಳು ಕಡಿಮೆ ಇಂಧನದಲ್ಲಿ ಹೆಚ್ಚು ದೂರ ಓಡಬಲ್ಲವು. ಜತೆಗೆ ಪರಿಸರ ಮಾಲಿನ್ಯವನ್ನೂ ಇವು ಕಡಿಮೆ ಮಾಡುತ್ತವಂತೆ. ಇದು ಎಲೆಕ್ಟ್ರಿಕ್ ಕಾರುಗಳಿಗೆ ಪರ್ಯಾಯ ಅಂತಲೂ ಹೇಳಲಾಗುತ್ತಿದೆ.

ಜಿನೀವಾ ಆಟೋ ಶೋನಲ್ಲಿ ಪ್ರದರ್ಶನಗೊಂಡ ಇಂತಹ ಕಾರುಗಳು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೂ ಪ್ರವೇಶಿಸಲಿವೆ. ಲಕ್ಷುರಿ ಕಾರುಗಳನ್ನು ಪರಿಚಯಿಸಿರುವ ವೋಕ್ವೇಗನ್ ಸಂಸ್ಥೆಯ ಪೋಲೋ ಇಂತಹ ಕಾರುಗಳಲ್ಲಿ ಒಂದು. ಇದು ಈ ಪ್ರದರ್ಶನದಲ್ಲಿ ಎಲ್ಲರ ಗಮನದ ಕೇಂದ್ರಬಿಂದುವಾಯಿತು. ಪೋಲೋ 1.6 ಟಿಡಿಐ ಕಾರು ವಿಶ್ವದಲ್ಲೇ ಐದು ಸೀಟುಗಳ ಸಾಮರ್ಥ್ಯ ಹೊಂದಿರುವ ಹಾಗೂ ಅತಿ ಕಡಿಮೆ ಇಂಧನ ಬಳಸುವ ಏಕಮಾತ್ರ ಕಾರು ಆಗಲಿದೆ. ಇದು 90 ಪಿಎಸ್ ಶಕ್ತಿ ಉತ್ಪಾದಿಸುವ ತಾಕತ್ತು ಹೊಂದಿದೆ.

ಪೋಲೋದಲ್ಲಿರುವ ಬ್ಲೂ ಮೋಷನ್ ಪ್ಯಾಕೇಜ್ ಸಿಸ್ಟಮ್ ಯುರಿಯಾವನ್ನು ಹೀರಿಕೊಂಡು ಇಂಧನ ಕಾರಿನಿಂದ ವಾತಾವರಣಕ್ಕೆ ಬಿಡುಗಡೆ ಮಾಡುವ ಕೆಟ್ಟ ಅನಿಲಗಳ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಇದು ಪರಿಸರಸ್ನೇಹಿ ಕೂಡಾ. ವೋಕ್ವೇಗನ್ ಹೇಳುವ ಪ್ರಕಾರ ಇದು ಲೀಟರ್‌ಗೆ 26 ಕಿ.ಮೀ. ದೂರ ಸಾಗಬಲ್ಲುದು. ಬ್ಲೂಮೋಷನ್ ಟೆಕ್ನಾಲಜಿಯನ್ನು ಆಯಾ ದೇಶದ ವಾತಾರಣಕ್ಕೆ ಡ್ರೈನಿಂಗ್ ಕಂಡೀಶನ್‌ಗೆ ಅನುಗುಣವಾಗಿ ಬದಲಾಯಿಸಬೇಕಾಗುತ್ತದೆ. ಭಾರತದಲ್ಲಿ ಮುಂದಿನ ವರ್ಷ ಈ ಕಾರಿನ ಮಾರಾಟ ಆರಂಭಗೊಳಿಸಲಾಗುತ್ತದೆ ಎಂದು ವೋಕ್ವೇಗನ್ ಹೇಳಿಕೊಂಡಿದೆ.

ಪೋಲೋವಿನ ಇನ್ನೊಂದು ಬಗೆ ಕಾರಿನಲ್ಲಿ 1.2ಟಿಎಸ್ಐ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು ಸುಮಾರು 18 ಕಿ.ಮೀ ಮೈಲೇಜು ನೀಡಬಲ್ಲುದು. ಇದರ ಜತೆಗೆ ಅದು ಉತ್ಪಾದಿಸುವ ಶಕ್ತಿಯ ಪ್ರಮಾಣ 105 ಪಿಎಸ್.
ಈ ಪ್ರದರ್ಶನದಲ್ಲಿ ವೋಕ್ವೇಗನ್ ಸಂಸ್ಥೆ ಪೋಲೋ ಬ್ಲೂಮೋಷನ್ ಕಾನ್ಸೆಪ್ಟ್ ಕಾರನ್ನೂ ಪ್ರದರ್ಶಿಸಿದ್ದು, ಅದು ಯುರೋಪ್‌ನಲ್ಲಿ ಮುಂದಿನ ವರ್ಷ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಈ ಕಾರು ಒಂದು ಲೀಟರ್ ಡೀಸೆಲ್‌ಗೆ 30 ಕಿ.ಮೀ.ಓಡುತ್ತದೆ.

ವೋಕ್ವೇಗನ್ ಸಂಸ್ಥೆ ತನ್ನ ತಾಂತ್ರಿಕ ನಿಪುಣತೆಯಲ್ಲಿ ವಿಶ್ವದಲ್ಲಿ ಉತ್ತಮ ಸ್ಥಾನ ಹೊಂದಿದ್ದು, ಇದರಿಂದಾಗಿ ಇತರ ಕಾರು ಉತ್ಪಾದಕ ಸಂಸ್ಥೆಗಳೂ ಸ್ಪರ್ಧಾತ್ಮಕವಾಗಿ ವಿನೂತನ ತಂತ್ರಜ್ಞಾನಗಳ ಕಾರು ಹೊರಬರಲು ಸಾಧ್ಯವಾಯಿತು. ಉದಾಹರಣೆಗೆ, ಮಾರುತಿ ಸುಝುಕಿ ತನ್ನ ಕಾರುಗಳನ್ನು ಇತ್ತೀಚೆಗೆ ಆರಂಭಿಸಿದ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಇಂಧನ ಉಳಿತಾಯಕ್ಕೆ ನೆರವಾಯಿತು. ಇಂತಹುದೇ ಹೊಸ ಮಾದರಿಯ ಇಂಧರ ಉಳಿತಾಯ ತಂತ್ರಜ್ಞಾನಗಳು ಪೋಲೋದಲ್ಲಿವೆ. ಜರ್ಮನ್‌ನ ಮರ್ಸಿಡಸ್ ಸಂಸ್ಥೆಯೂ ಇ350 ಎಂಬ ಹೊಸ ಕಾರನ್ನು ಪ್ರದರ್ಶಿಸಿದ್ದು ಈ ಕಾರೂ ಮುಂದಿನ ವರ್ಷಗಳಲ್ಲಿ ಭಾರತದ ರಸ್ತೆಗಿಳಿಯುವ ಮುನ್ಸೂಚನೆ ತೋರಿಸಿದೆ. ಇದು ಮರ್ಸಿಡಸ್‌ನ ಉಳಿದೆಲ್ಲ ಕಾರುಗಳಿಗಿಂತ ಕಡಿಮೆ ಭಾರದ ಕಾರಾಗಿದ್ದು, ಇದರ ಬ್ಲೂ ಟೆಕ್ ಡೀಸಲ್ ಎಂಜಿನ್ ಸುಮಾರು 18.8 ಕಿ.ಮೀ. ಮೈಲೇಜ್ ನೀಡಬಲ್ಲುದು.

ಈ ಎಲ್ಲವುಗಳ ಜತೆಗೆ ಟಾಟಾದ ಇಂಡಿಕಾ ಎಲೆಕ್ಟ್ರಿಕ್ ಕಾರೂ ಪ್ರದರ್ಶನಗೊಂಡಿದೆ. ಟಾಟಾ ಅಧ್ಯಕ್ಷ ರತನ್ ಟಾಟಾ ಹೇಳುವಂತೆ ಈ ಎಲೆಕ್ಟ್ರಿಕ್ ಇಂಡಿಕಾ ಕಾರು ಕೇವಲ ಒಂದು ಬಾರಿಯ ಚಾರ್ಜ್‌ನಿಂದ 200 ಕಿ.ಮೀ ಓಡಬಲ್ಲುದು. ಇದು ನಾರ್ವೆಯಲ್ಲಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದರಿಂದ ಎಲೆಕ್ಟ್ರಿಕ್ ಕಾರು ತಯಾರಿಸಿದ ಎರಡನೇ ಭಾರತೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಟಾಟಾ ಪಾತ್ರವಾಗಿದೆ. ಮಹೀಂದ್ರಾ ಎಂಡ್ ಮಹೀಂದ್ರಾ ಕೂಡಾ 2010ರಲ್ಲಿ ದೊಡ್ಡ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹುಂಡೈ ಮಾರಟದಲ್ಲಿ ಚೇತರಿಕೆ
ಕೆನರಾ ಬ್ಯಾಂಕ್ ಬಡ್ಡಿದರ ಕಡಿತ
ಆರ್‌ಬಿಐನಿಂದ ರೆಪೋ ದರ ಕಡಿತ
ಮೈಕ್ರೋಸಾಪ್ಟ್‌‌ನಿಂದ ಎಚ್-1ಬಿ ವೀಸಾ ಹೋಲ್ಡರ್‌ ವಜಾ
ವಿದೇಶಿ ಹೂಡಿಕೆ 29 ಪ್ರಸ್ತಾಪಕ್ಕೆ ಭಾರತ ಅಂಕಿತ
ಮುಂಬೈ-ಲಕ್ನೋಗೆ ನೂತನ ವಿಮಾನ: ಜೆಟ್‌ ಏರ್‌ವೇಸ್