ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಕುಸಿತ: ಐಐಎಂಬಿಗೂ ತಟ್ಟಿದ ಬಿಸಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಕುಸಿತ: ಐಐಎಂಬಿಗೂ ತಟ್ಟಿದ ಬಿಸಿ
ಜಾಗತಿಕ ಆರ್ಥಿಕ ಹಿನ್ನಡೆ ಪ್ರತಿಷ್ಠಿತ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗೂ ತಟ್ಟಿದೆಯೇ? ಈ ಪ್ರಶ್ನೆಗೆ ಸ್ವತಃ ಐಐಎಂಬಿಯೇ ಹೌದು ಎಂಬ ಉತ್ತರ ನೀಡುತ್ತದೆ. ಈವರೆಗಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಐಐಎಂಬಿ ಪದವೀಧರರಿಗೆ ಉದ್ಯೋಗಾವಕಾಶವೂ ಕಡಿಮೆ. ಜತೆಗೆ ಕ್ಯಾಂಪಸ್ ಸಂದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಆಫರ್ ಮಾಡುವ ಸಂಬಳದ ಪ್ರಮಾಣದಲ್ಲೂ ಇಳಿಕೆಯಾಗಿದೆ.

ಐಐಎಂಬಿ ನಿರ್ದೇಶಕ ಪಂಕಜ್ ಚಂದ್ರ ಹೇಳುವ ಪ್ರಕಾರ, ಈಗ ಪದವಿ ಮುಗಿಸುವ ವಿದ್ಯಾರ್ಥಿಗಳಿಗೆ ಕಷ್ಟದ ದಿನಗಳು ಎದುರಾಗಿವೆ. ಉತ್ತಮ ಸಂಬಳದ ಉತ್ತಮ ಕೆಲಸ ಸಿಗುವುದು ಸ್ವಲ್ಪ ಕಷ್ಟವೆನಿಸಿದೆ. ಆದರೂ, ಈ ಬಾರಿ ಹೆಚ್ಚಿನ ಕಂಪನಿಗಳು ಬಂದಿದ್ದರಿಂದ ಫೆಬ್ರವರಿ 27ರಿಂದ ಆರಂಭವಾದ ಕ್ಯಾಂಪಸ್ ಸಂದರ್ಶನ ನಿಗದಿತ ದಿನದೊಳಗೆ ಮುಗಿಯದೆ ಒಂದು ವಾರದಷ್ಟು ಸಮಯವನ್ನು ಮುಂದೂಡಬೇಕಾಯಿತು ಎನ್ನುತ್ತಾರೆ.

ಜಾಗತಿಕ ಆರ್ಥಿಕ ಕುಸಿತ ಮಾತ್ರ ಈ ಬಾರಿ ತನ್ನ ಪ್ರಭಾವವನ್ನು ಬೀರಿದೆ ಎಂದು ಒಪ್ಪಿಕೊಳ್ಳುವ ಪಂಕಜ್ ಚಂದ್ರ, ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕ್ಯಾಂಪಸ್ ಸಂದರ್ಶನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳ ಭಾಗವಹಿಸುವಿಕೆ ಕಡಿಮೆಯಾಗಿದೆ ಎಂದರು. ಈಗಿರುವ 260 ಮಂದಿ ವಿದ್ಯಾರ್ಥಿಗಳಲ್ಲಿ 8-10 ಮಂದಿ ಸ್ವಂತ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಿಲ್ಲ. ಉಳಿದ ಎಲ್ಲರಿಗೂ ಉದ್ಯೋಗಾವಕಾಶ ಲಭ್ಯವಾಗಬಹುದು ಎಂಬ ಭರವಸೆಯಿದ. ಕಳೆದ ವರ್ಷದ ಬ್ಯಾಚ್‌ನ ಎಲ್ಲರಿಗೂ (256 ಮಂದಿ) ಕ್ಯಾಂಪಸ್ ಮೂಲಕ ಉದ್ಯೋಗಾವಕಾಶ ಲಭ್ಯವಾಗಿತ್ತು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇ. 3.03ಗೆ ಕುಸಿತ ಕಂಡ ಹಣದುಬ್ಬರ ದರ
ಭಾರತಕ್ಕೆ ಹೆಚ್ಚು ಮೈಲೇಜ್ ನೀಡುವ ಕಾರುಗಳ ಲಗ್ಗೆ
ಹುಂಡೈ ಮಾರಟದಲ್ಲಿ ಚೇತರಿಕೆ
ಕೆನರಾ ಬ್ಯಾಂಕ್ ಬಡ್ಡಿದರ ಕಡಿತ
ಆರ್‌ಬಿಐನಿಂದ ರೆಪೋ ದರ ಕಡಿತ
ಮೈಕ್ರೋಸಾಪ್ಟ್‌‌ನಿಂದ ಎಚ್-1ಬಿ ವೀಸಾ ಹೋಲ್ಡರ್‌ ವಜಾ