ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೊರಗುತ್ತಿಗೆ: ಭಾರತದೊಂದಿಗೆ ಹಲವು ರಾಷ್ಟ್ರಗಳ ಸ್ಪರ್ಧೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊರಗುತ್ತಿಗೆ: ಭಾರತದೊಂದಿಗೆ ಹಲವು ರಾಷ್ಟ್ರಗಳ ಸ್ಪರ್ಧೆ
ಹೊರಗುತ್ತಿಗೆ ಕ್ಷೇತ್ರದಲ್ಲಿ ಭಾರತಕ್ಕಿಂತ ದೊಡ್ಡಣ್ಣ ಬೇರಾರು ಇಲ್ಲ ಎಂದು ಭಾರತೀಯರು ಬೀಗುವುದಕ್ಕೆ ಇನ್ನು ಅರ್ಥವಿಲ್ಲ. ಏಕೆಂದರೆ ಹೊರಗುತ್ತಿಗೆ ಕ್ಷೇತ್ರದಲ್ಲಿ ಕೇವಲ ಚೀನಾದೊಂದಿಗೆ ಮಾತ್ರ ಭಾರೀ ಪೈಪೋಟಿ ಎದುರಿಸುತ್ತಿದ್ದ ಭಾರತ ಈಗ ಮೂರನೇ ಜಗತ್ತೊಂದರ ಜತೆಗೂ ಭಾರೀ ಸ್ಪರ್ಧೆ ಮಾಡಬೇಕಾಗಿದೆ.

ಗಾರ್ಟ್ನರ್ ರೀಸರ್ಚ್ ಇಂಡಿಯಾದ ಲ್ಯಾಫರ್ಡ್ ಹೇಳುವಂತೆ, ಹೊರಗುತ್ತಿಗೆ ವಲಯ ಯಾವಾಗ ಉತ್ಪನ್ನ ಆಧಾರಿತ ಸೇವೆಯಾಗಿ ಪರಿವರ್ತನೆ ಹೊಂದಲು ಆರಂಭವಾಯಿತೋ, ಅಲ್ಲಿಂದಲೇ ಚೀನಾದಲ್ಲಿರುವ ಭಾರತ ಆಧಾರಿತ ಸೇವಾದಾರರು ಭಾರತದೊಂದಿಗೆ ಪೈಪೋಟಿ ಒಡ್ಡಲು ಶರು ಮಾಡಿದ್ದರು. ಈಗ ವಿಯೆಟ್ನಾ, ಥಾಯ್‌ಲ್ಯಾಂಡ್‌ಗಳೂ ಈಗ ಭಾರತದೊಂದಿಗೆ ನೇರವಾಗಿ ಸ್ಪರ್ಧಿಸಲು ಹೊರಟಿವೆ.

ಇದಲ್ಲದೆ, ಲ್ಯಾಟಿನ್ ಅಮೆರಿಕಾ, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್‌ಗಳೂ ನಿಧಾನವಾಗಿ ಹೊರಗುತ್ತಿಗೆ ವಲಯದಲ್ಲಿ ತಲೆ ಎತ್ತಿ ನಿಲ್ಲಲು ಆರಂಭಿಸಿವೆ. ಈಗ ಸ್ಥಳೀಯವಾಗಿಯೇ ಈ ವಲಯದಲ್ಲಿ ಮುಂದುವರಿದಿರುವ ಆ ದೇಶಗಳು ಶೀಘ್ರದಲ್ಲೇ ಭಾರತ, ಚೀನಾಗಳೊಂದಿಗೆ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಲ್ಯಾಫರ್ಡ್.

ಇವಿಷ್ಟೇ ಅಲ್ಲದೆ, ಪೂರ್ವ ಯುರೋಪ್‌ನ ಹಲವಾರು ದೇಶಗಳು ಈಗ ಹೊರಗುತ್ತಿಗೆಯತ್ತ ಹೊರಳುತ್ತಿವೆ. ಆದರೆ, ಅಲ್ಲಿನ ಭಾಷೆ ಹಾಗೂ ಸಂಪ್ರದಾಯಗಳು ಈ ಉದ್ಯಮ ವಲಯಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಅಥವಾ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೂ ಭಾರತ ಹಾಗೂ ಚೀನಾ ಈ ಉದ್ಯಮದಲ್ಲಿ ಹೊಂದಿರುವ ಕೌಶಲ್ಯಗಳೊಂದಿಗೆ ಈ ರಾಷ್ಟ್ರಗಳಿಗೆ ಸ್ಪರ್ಧಿಸಲು ಕಷ್ಟವಾಗಬಹುದು. ಚೀನಾದ ಕಂಪನಿಗಳಿಗೂ ಭಾಷೆ ಹಾಗೂ ಸಂಸ್ಕೃತಿ ಬಹುದೊಡ್ಡ ತೊಡಕಾದರೂ, ಅವರಿಗೆ ತಮ್ಮ ತಪ್ಪುಗಳನ್ನು ಬೇಗನೆ ತಿದ್ದಿಕೊಳ್ಳುವ ಅಪರೂಪದ ಗುಣವಿದೆ. ಹಾಗೂ ಅಷ್ಟೇ ವೇಗವಾಗಿ ಹೊಸತನ್ನು ಕಲಿಯುವ ಸಹನೆಯಿದೆ. ಆದ್ದರಿಂದಲೇ ಭಾರತದಂತಹ ಹೊರಗುತ್ತಿಗೆ ಕ್ಷೇತ್ರದ ದೈತ್ಯನೊಂದಿಗೆ ಸ್ಪರ್ಧಿಸುವುದು ಚೀನಾಕ್ಕೆ ಸಾಧ್ಯವಾಯಿತು ಎಂಬುದು ಲ್ಯಯಾಫರ್ಡ್ ಅಭಿಪ್ರಾಯ.

ಭಾರತ ಈ ವಲಯದಲ್ಲಿ ತನ್ನ ಸಾಮರ್ಥ್ಯವನ್ನು ಇನ್ನೂ ಹಾಗೆಯೇ ಉಳಿಸಬೇಕೆಂದರೆ, ಕೇವಲ ಅಮೆರಿಕದ ಸಂಬಂಧ ಮಾತ್ರವಲ್ಲದೆ ಇತರೆಡೆಗೂ ತನ್ನ ಸಂಬಂಧವನ್ನು ಬೆಳೆಸಬೇಕಾಗುತ್ತದೆ. ಇದಲ್ಲದೆ ಭಾರತದಲ್ಲೂ ಭಾಷೆಯ ತೊಡಕು ಇದೆ. ಅದನ್ನು ಭಾರತೀಯ ಹೊರಗುತ್ತಿಗೆ ಸೇವಾದಾರರು ಸರಿಪಡಿಸಿಕೊಳ್ಳಬೇಕು. ಇಂಗ್ಲೀಷ್ ಮಾತನಾಡುವ ರಾಷ್ಟ್ರಗಳು ಭಾರತವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರೂ, ಇಂಗ್ಲೀಷ್ ಒಲ್ಲದ ದಕ್ಷಿಣ ಅಮೆರಿಕ, ಪೂರ್ವ ಯುರೋಪ್‌ಗಳನ್ನೂ ತನ್ನ ಸಂಬಂಧ ವೃದ್ಧಿಸಿಕೊಳ್ಳಬೇಕು. ಆದರೆ ಈಗಿನ ಆರ್ಥಿಕ ಕುಸಿತದ ಪರಿಣಾಮದಿಂದ ಸೇವಾದಾರರು ಸ್ವಲ್ಪ ಹಿಂಜರಿಯುತ್ತಿದ್ದಾರೆ ಎನ್ನುತ್ತಾರೆ ಲ್ಯಾಫರ್ಡ್.

ಇದಲ್ಲದೆ, ಜಾಗತಿಕ ಆರ್ಥಿಕ ಕುಸಿತ, ಸತ್ಯಂ ಗೋಲ್‌ಮಾಲ್, ಮುಂಬೈ ಉಗ್ರರ ದಾಳಿ, ಚೀನಾದಲ್ಲಿ ತಗಲುವ ಹಡಗು ವೆಚ್ಚದ ವಿಚಾರಗಳೆಲ್ಲವೂ ಈಗ ಅಮೆರಿಕದ ಕಂಪನಿಗಳನ್ನು ಭಾರತ ಹಾಗೂ ಚೀನಾದಿಂದ ಹಿಂದೆ ಸರಿಯುವಂತೆ ಮಾಡುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಕುಸಿತ: ಐಐಎಂಬಿಗೂ ತಟ್ಟಿದ ಬಿಸಿ
ಶೇ. 3.03ಗೆ ಕುಸಿತ ಕಂಡ ಹಣದುಬ್ಬರ ದರ
ಭಾರತಕ್ಕೆ ಹೆಚ್ಚು ಮೈಲೇಜ್ ನೀಡುವ ಕಾರುಗಳ ಲಗ್ಗೆ
ಹುಂಡೈ ಮಾರಟದಲ್ಲಿ ಚೇತರಿಕೆ
ಕೆನರಾ ಬ್ಯಾಂಕ್ ಬಡ್ಡಿದರ ಕಡಿತ
ಆರ್‌ಬಿಐನಿಂದ ರೆಪೋ ದರ ಕಡಿತ