ಜಾಗತಿಕ ಆರ್ಥಿಕ ಕುಸಿತದ ಪರಿಣಾಮವಾಗಿ 2009ರಲ್ಲಿ ಇನ್ನೂ ಹೆಚ್ಚಿನ ಮಂದಿಗೆ ಉದ್ಯೋಗ ನಷ್ಟವಾಗಬಹುದು ಎಂದು ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್‌ಒ) ಎಚ್ಚರಿಕೆ ನೀಡಿದೆ. ಅದರಲ್ಲೂ ಮಹಿಳೆಯರ ಉದ್ಯೋಗ ನಷ್ಟ ಈ ವರ್ಷ ಹೆಚ್ಚಾಗುವ ಸಂಭವವಿದ್ದು, ಜಗತ್ತಿನೆಲ್ಲೆಡೆ ಒಟ್ಟು 24ರಿಂದ 52 ಮಿಲಿಯನ್ ಮಂದಿ ಉದ್ಯೋಗ ಕಳೆದುಕೊಳ್ಳಬಹುದು. ಅದರಲ್ಲಿ 10ರಿಂದ 22 ಮಿಲಿಯನ್ ಮಂದಿ ಮಹಿಳೆಯರೇ ಆಗಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಐಎಲ್‌ಒ ತಿಳಿಸಿದೆ. |