ವಿಶ್ವದ 48 ದಾನಿಗಳಲ್ಲಿ ಭಾರತದ ನಾಲ್ಕು ಮಂದಿ ಸ್ಥಾನ ಪಡೆದಿದ್ದಾರೆ. ಟೆಲಿಕಾಂ ಉದ್ಯಮದ ದೈತ್ಯ ಸುನಿಲ್ ಮಿತ್ತಲ್, ಭಾರತೀಯ ಮೂಲದ ವಿದೇಶೀ ಉದ್ಯಮಿ ಅನಿಲ್ ಅಗರ್‌ವಾಲ್, ಬೆಂಗಳೂರಿನ ರೋಹಿಣಿ ನೀಲೇಕಣಿ (ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಪತ್ನಿ) ಹಾಗೂ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಅಧ್ಯಕ್ಷ ಶಿವ ನದಾರ್ ಈ ನಾಲ್ವರು ಭಾರತದ ಹೀರೋಗಳು. ಅಮೆರಿಕದ ಬ್ಯುಸಿನೆಸ್ ಮ್ಯಾಗಜಿನ್ ಫೋರ್ಬ್ಸ್ ಈ ನಾಲ್ವರು ಭಾರತೀಯರನ್ನು 48 ದಾನಿಗಳ ಪಟ್ಟಿಯಲ್ಲಿ ಸೇರಿಸಿದೆ. |