ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾದಿಂದ ಮತ್ತೊಂದು ಕಾರು: ಹೈಬ್ರಿಡ್ ನ್ಯಾನೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾದಿಂದ ಮತ್ತೊಂದು ಕಾರು: ಹೈಬ್ರಿಡ್ ನ್ಯಾನೋ
ಟಾಟಾ ಮೋಟಾರ್ ಸಂಸ್ಥೆ ತನ್ನ ನ್ಯಾನೋ ಕಾರಿನ ಮೈಕ್ರೋ-ಹೈಬ್ರಿಡ್ ಮಾದರಿಯನ್ನು ಹೊರತರಲು ಇದೀಗ ಕಾರ್ಯಾಚರಣೆ ಆರಂಭಿಸಿದೆ. ಈ ಹೈಬ್ರಿಡ್ ನ್ಯಾನೋ ಕಾರು ಟಾಟಾದ ಹೊಸ ನ್ಯಾನೋ ಕಾರಿಗಿಂತ ಕಡಿಮೆ ಇಂಧನದಲ್ಲಿ ಹೆಚ್ಚು ಮೈಲೇಜ್ ನೀಡಬಲ್ಲುದಲ್ಲದೆ, ವಿಶ್ವದ ಮತ್ತೊಂದು ಅಗ್ಗದ ಕಾರಾಗಿ ಹೊರಹೊಮ್ಮಲಿದೆ.

ಟಾಟಾ ಇದೀಗ ತನ್ನ ಆ ಕನಸಿನ ಸಾಕಾರಕ್ಕಾಗಿ ಬಾಷ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಟಾಟಾದ ಉನ್ನತ ಮೂಲಗಳು ತಿಳಿಸಿವೆ. ಸ್ಟಾರ್ಟ್-ಸ್ಟಾಪ್ ತಾಂತ್ರಿಕತೆ ಬಳಸಿ ಈ ಕಾರನ್ನು ತಯಾರಿಸಲು ಟಾಟಾ ಯೋಚಿಸುತ್ತಿರುವುದರಿಂದ ಬಾಷ್ ಜತೆ ಮಾತುಕತೆ ನಡೆಸುತ್ತಿದೆ. ಈ ಕಾರು ಅಸ್ತಿತ್ವಕ್ಕೆ ಬಂದಲ್ಲಿ ಟಾಟಾದ ಹೊಸ ನ್ಯಾನೋಗಿಂತ ಈ ಹೈಬ್ರಿಡ್ ನ್ಯಾನೋ ಸುಮಾರು ಮೂರರಿಂದ ನಾಲ್ಕು ಸಾವಿರ ರುಪಾಯಿಗಳಷ್ಟು ಹೆಚ್ಚು ಬೆಲೆ ತಗುಲಬಹುದು ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2010ರಲ್ಲಿ ವ್ಯಾಪಾರ, ಲಾಭದಲ್ಲಿ ಸುಧಾರಣೆ
ವಿಶ್ವದ 48 ದಾನಿಗಳಲ್ಲಿ ಭಾರತದ ನಾಲ್ವರು
2009ರಲ್ಲಿ ಹೆಚ್ಚು ಉದ್ಯೋಗ ನಷ್ಟ: ಐಎಲ್‌ಒ
ಹೊರಗುತ್ತಿಗೆ: ಭಾರತದೊಂದಿಗೆ ಹಲವು ರಾಷ್ಟ್ರಗಳ ಸ್ಪರ್ಧೆ
ಆರ್ಥಿಕ ಕುಸಿತ: ಐಐಎಂಬಿಗೂ ತಟ್ಟಿದ ಬಿಸಿ
ಶೇ. 3.03ಗೆ ಕುಸಿತ ಕಂಡ ಹಣದುಬ್ಬರ ದರ