ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ರಿಟೀಷ್ ಏರ್‌ವೇಸ್ ಲಂಡನ್ ಪ್ರಯಾಣಕ್ಕೆ ಪ್ರೋತ್ಸಾಹಕ ಯೋಜನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಿಟೀಷ್ ಏರ್‌ವೇಸ್ ಲಂಡನ್ ಪ್ರಯಾಣಕ್ಕೆ ಪ್ರೋತ್ಸಾಹಕ ಯೋಜನೆ
ಬ್ರಿಟೀಷ್ ಏರ್‌ವೇಸ್ ಭಾರತದ ಪ್ರಮುಖ ನಗರಗಳಿಂದ ಲಂಡನ್‌ಗೆ ಪ್ರಯಾಣಿಸಲು ಪ್ರೋತ್ಸಾಹಕ ಯೋಜನೆಯನ್ನು ಪ್ರಕಟಿಸಿದೆ. ಭಾರತದ ಪ್ರಮುಖ ನಗರಗಳಿಂದ ಲಂಡನ್‌ಗೆ ವಿಶೇಷ ಮೂಲ ದರ ಕೇವಲ 9,990 ರೂಪಾಯಿಗಳು. ಈವರೆಗೆ ಈ ದರ 22 ಸಾವಿರ ರುಪಾಯಿಗಳಾಗಿತ್ತು.

ಭಾರತದ ನವದೆಹಲಿ, ಮುಂಬೈ, ಚೆನ್ನೆ, ಹೈದರಾಬಾದ್ ಹಾಗೂ ಬೆಂಗಳೂರುಗಳಿಂದ ಲಂಡನ್‌ಗೆ ಪ್ರಯಾಣಿಸುವವರಿಗೆ ಮಾತ್ರ ಈ ವಿಶೇಷ ಮೂಲ ದರ ಅನ್ವಯವಾಗುತ್ತದೆ. ಇದಲ್ಲದೆ, ಈ ಮೂಲ ದರದೊಂದಿಗೆ ತೆರಿಗೆ ಹಾಗೂ ಇತರ ಶುಲ್ಕಗಳು ಒಳಗೊಳ್ಳುತ್ತವೆ. ಇದು ಸುಮಾರು 18 ಸಾವಿರ ರುಪಾಯಿಗಳಾಗಬಹುದು. ಹಾಗಾಗಿ ಒಟ್ಟು ಲಂಡನ್ ವಿಮಾನ ಪ್ರಯಾಣ ದರ 27,990 ರೂಪಾಯಿಗಳು ಎಂದು ಬ್ರಿಟೀಷ್ ಏರ್‌ವೇಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ರಿಟೀಷ್ ಏರ್‌ವೇಸ್‌ನ ದಕ್ಷಿಣ ಏಷ್ಯಾದ ಕಮರ್ಷಿಯಲ್ ವ್ಯವಸ್ಥಾಪಕ ಅಮಂಡಾ ಅಮೋಸ್ ಹೇಳುವಂತೆ, ಭಾರತ ಬ್ರಿಟೀಷ್ ಏರ್‌ವೇಸ್‌ನ ಅತ್ಯಂತ ಮುಖ್ಯಮಾದ ಮಾರುಕಟ್ಟೆಗಳಲ್ಲಿ ಒಂದು. ಹೀಗಾಗಿ ಅಲ್ಲಿನ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವುದು ನಮ್ಮ ಕರ್ತವ್ಯ ಎನ್ನುತ್ತಾರೆ. ಈ ಪ್ರೋತ್ಸಾಹಕ ಯೋಜನೆಯಡಿ ಬುಕ್ಕಿಂಗ್ ಮಾಡಲು ಮಾ.22ರವರೆಗೆ ಅವಕಾಶವಿದೆ. ವಾರಕ್ಕೆ 48 ವಿಮಾನಗಳ ಸೇವೆಯನ್ನು ಇದು ಭಾರತದ ಪ್ರಮುಖ ನಗರಗಳಿಗೆ ನೀಡುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಕಷ್ಟದಲ್ಲಿ ಜನರಲ್ ಮೋಟಾರ್ಸ್
ಬಿಎಸ್‌ಎನ್‌ಎಲ್ ದರ ಕಡಿತ
ಟಾಟಾದಿಂದ ಮತ್ತೊಂದು ಕಾರು: ಹೈಬ್ರಿಡ್ ನ್ಯಾನೋ
2010ರಲ್ಲಿ ವ್ಯಾಪಾರ, ಲಾಭದಲ್ಲಿ ಸುಧಾರಣೆ
ವಿಶ್ವದ 48 ದಾನಿಗಳಲ್ಲಿ ಭಾರತದ ನಾಲ್ವರು
2009ರಲ್ಲಿ ಹೆಚ್ಚು ಉದ್ಯೋಗ ನಷ್ಟ: ಐಎಲ್‌ಒ