ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಿಎಸ್ಎನ್ಎಲ್‌ನಿಂದ ಗ್ರಾಹಕರಿಗೆ ಭಾರೀ ಉಡುಗೊರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಸ್ಎನ್ಎಲ್‌ನಿಂದ ಗ್ರಾಹಕರಿಗೆ ಭಾರೀ ಉಡುಗೊರೆ
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಗ್ರಾಹಕರಿಗೆ ಬಹುಮಾನವಾಗಿ ಬಿಎಸ್ಎನ್ಎಲ್ ತನ್ನ ದರದಲ್ಲಿ ಭಾರೀ ಕಡಿತ ಘೋಷಿಸಿದೆ. ದೇಶಾದ್ಯಂತ ಇರುವ 35 ಮಿಲಿಯನ್ ಬಿಎಸ್ಎನ್ಎಲ್ ಸ್ಥಿರ ದೂರವಾಣಿ (ಲ್ಯಾಂಡ್‌ಲೈನ್) ಗ್ರಾಹಕರಿಗೆ ಇನ್ನು ತಮ್ಮ ಹಳೆಯ ದರದಲ್ಲೇ ಹೆಚ್ಚು ಸಮಯ ಮಾತನಾಡುವ ಅವಕಾಶ ಒದಗಿಸಿದೆ.

ಈಗ ಬದಲಾದ ದರ ಕೇವಲ ಸ್ಥಿರ ದೂರವಾಣಿಯಿಂದ ಸ್ಥಿರ ದೂರವಾಣಿಗೆ ಮಾಡುವ ಕರೆಗಳಿಗೆ ಹಾಗೂ ಸ್ಥಿರ ದೂರವಾಣಿಯಿಂದ ಡಬ್ಲ್ಯುಎಲ್‌ಎಲ್ (ವೈರ್‌ಲೆಸ್ ಇನ್ ಲೋಕಲ್ ಲೂಪ್ ಕಾಲ್ಸ್)ಗಳಿಗೆ ಅನ್ವಯವಾಗುತ್ತದೆ. ಆದರೆ ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಮಾಡುವ ಕರೆಗಳಿಗೆ ಈ ಹೊಸ ಯೋಜನೆಯಲ್ಲಿ ಕಡಿತ ಇಲ್ಲ.

ಬಿಎಸ್‌ಎನ್ಎಲ್‌ನಿಂದ ಇತರ ನೆಟ್ವರ್ಕ್‌ಗಳನ್ನು ಹೊಂದಿರುವ ಸ್ಥಿರ ದೂರವಾಣಿಗಳಿಗೆ ಮಾಡುವ ಕರೆಗಳಿಗೆ ಎರಡು ನಿಮಿಷಕ್ಕೆ ಒಂದು ರೂಪಾಯಿಗಳಿರುತ್ತದೆ. ಈವರೆಗೆ ಒಂದು ನಿಮಿಷಕ್ಕೆ ಒಂದು ರೂಪಾಯಿ ದರವಿತ್ತು. ಆದರೆ ಈಗಲೂ, ಕೇವಲ ಒಂದು ನಿಮಿಷ ಮಾತನಾಡಿದರೆ ಒಂದು ರೂಪಾಯಿಗಳೇ ಇರುತ್ತದೆ. ಯಾಕೆಂದರೆ ಬಿಎಸ್ಎನ್ಎಲ್ ಈ ಬಾರಿ ಕರೆಯ ಅವಧಿಯನ್ನು ಮಾತ್ರ ಎರಡು ನಿಮಿಷಗಳಿಗೆ ಹೆಚ್ಚಿಸಿದೆ. ಹಳೆಯ ದರದಲ್ಲೇ ಹಳೆದಕ್ಕಿಂತ ದುಪ್ಪಟ್ಟು ಮಾತನಾಡಬಲ್ಲ ಯೋಜನೆ ಇದಾಗಿದೆ.

ಈ ಹೊಸ ದರ ಮಾರ್ಚ್ ಒಂದರಿಂದಲೇ ಆರಂಭವಾಗಿದ್ದು, ಹೆಚ್ಚು ಹೆಚ್ಚು ಸ್ಥಿರ ದೂರವಾಣಿಗಳನ್ನು ಪಡೆಯಲು ಗ್ರಾಹಕರನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಬಿಎಸ್ಎನ್ಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ರಿಟೀಷ್ ಏರ್‌ವೇಸ್ ಲಂಡನ್ ಪ್ರಯಾಣಕ್ಕೆ ಪ್ರೋತ್ಸಾಹಕ ಯೋಜನೆ
ಸಂಕಷ್ಟದಲ್ಲಿ ಜನರಲ್ ಮೋಟಾರ್ಸ್
ಬಿಎಸ್‌ಎನ್‌ಎಲ್ ದರ ಕಡಿತ
ಟಾಟಾದಿಂದ ಮತ್ತೊಂದು ಕಾರು: ಹೈಬ್ರಿಡ್ ನ್ಯಾನೋ
2010ರಲ್ಲಿ ವ್ಯಾಪಾರ, ಲಾಭದಲ್ಲಿ ಸುಧಾರಣೆ
ವಿಶ್ವದ 48 ದಾನಿಗಳಲ್ಲಿ ಭಾರತದ ನಾಲ್ವರು