ಐಸಿಐಸಿಐ ಬ್ಯಾಂಕ್ ಗೃಹಸಾಲದ ಬಡ್ಡಿದರವನ್ನು ಶೇ.0.25ರಿಂದ 0.50ರಷ್ಟು ಇಳಿಸಿದ್ದು, ಇದು ಈಗಿನಿಂದಲೇ ಜಾರಿಗೆ ಬರಲಿದೆ. ಹೀಗಾಗಿ 20 ಲಕ್ಷಕ್ಕಿಂತ ಕಡಿಮೆ ಇರುವ ಆದ್ಯತಾ ವಲಯದ ಗೃಹ ಸಾಲದ ಹೊಸ ಬಡ್ಡಿದರ 9.75 ಆಗಿದೆ. ಈ ಹಿಂದೆ ಇದು ಶೇ.10ರಷ್ಟಿತ್ತು. 20ರಿಂದ 30 ಲಕ್ಷ ರುಪಾಯಿಗಳ ಗೃಹ ಸಾಲಗಳಿಗೆ ಈ ಹಿಂದೆ ಇದ್ದ ಬಡ್ಡಿದರ ಶೇ.10.50 ಇನ್ನು ಮುಂದೆ ಶೇ.10 ಆಗಲಿದೆ. 30 ಲಕ್ಷಕ್ಕಿಂತ ಹೆಚ್ಚಿನ ಗೃಹಸಾಲದ ಬಡ್ಡಿದ ಶೇ.11.50 ಆಗಿದ್ದು, ಈ ಹಿಂದೆ ಇದು ಶೇ.12 ಆಗಿತ್ತು. ಕಡಿಮೆಯಾದ ಬಡ್ಡಿದರ ಕೇವಲ ಹೊಸ ಗೃಹಸಾಲಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಐಸಿಐಸಿಐ ವಕ್ತಾರರು ತಿಳಿಸಿದ್ದಾರೆ. |