ಭಾರತ ಮತ್ತು ಚೀನಾದಂತಹ ರಾಷ್ಟ್ರಗಳು ಆಹಾರ ಧಾನ್ಯಗಳ ರಫ್ತಿಗೆ ನಿಷೇಧ ವಿಧಿಸಿರುವುದಕ್ಕೆ ಅಮೆರಿಕದ ಆಹಾರ ಸಂಶೋಧನಾ ಸಂಸ್ಥೆಯೊಂದು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದು ಆಮದು ಆಧಾರಿತ ದೇಶಗಳಲ್ಲಿ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದು ಆರೋಪಿಸಿದೆ.
ಅತ್ಯಧಿಕ ಬೆಲೆಗಳ ಈ ಸಮಯದಲ್ಲಿ ಆಮದು-ರಫ್ತನ್ನೇ ಅವಲಂಬಿಸಿರುವ ತೃತೀಯ ವಿಶ್ವದ ರಾಷ್ಟ್ರಗಳಿಗೆ ತೀವ್ರ ಹಾನಿಯುಂಟು ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (ಐಎಫ್‌ಪಿಆರ್ಐ) ಮಹಾ ನಿರ್ದೇಶಕ ಜೋಕಿಮ್ ವಾನ್ ಬ್ರಾನ್ ಅವರು ತಿಳಿಸಿದ್ದಾರೆ. |