ವಿಶ್ವದ 62 ಪ್ರಮುಖ ಆರ್ಥಿಕ ಕೇಂದ್ರಗಳ ಪೈಕಿ ಭಾರತ ಮುಂಬೈ ನಗರ 49ನೇ ಸ್ಥಾನದಲ್ಲಿದೆ. ಕಳೆದ ವರ್ಷವೂ ಮುಂಬೈ ಇದೇ ಸ್ಥಾನದಲ್ಲಿತ್ತು. ಲಂಡನ್ ಹಾಗೂ ನ್ಯೂಯಾರ್ಕ್ ಕಳೆದ ವರ್ಷದಂತೆಯೇ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ. ಜಾಗತಿಕ ಆರ್ಥಿಕ ಹಿಂಜರಿತದ ಪೆಟ್ಟು ಮೊದಲ ಎರಡು ಸ್ಥಾನದ ನಗರಗಳಿಗೆ ಬಿದ್ದಿಲ್ಲ. ದ ಗ್ಲೋಬಲ್ ಫೈನಾನ್ಶಿಯಲ್ ಸೆಂಟರ್ಸ್ ಇಂಡೆಕ್ಸ್, ಲಂಡನ್ ಮೂಲದ ಝಡ್-ಯೆನ್ ಗ್ರೂಪ್ ಸಹಯೋಗದಲ್ಲಿ ಈ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆ ಆನ್‌ಲೈನ್ ಪ್ರಶ್ನೋತ್ತರ ಹಾಗೂ ಸಂಖ್ಯಾವಾರು ದಾಖೆಗಳ ಆಧಾರದಲ್ಲಿ ನಡೆದಿತ್ತು. ಉಳಿದ ಟಾಪ್ ಟೆನ್ ಸಿಟಿಗಳಲ್ಲಿ ಮೂರನೇ ಸ್ಥಾನವನ್ನು ಸಿಂಗಾಪುರ ಪಡೆದರೆ, ನಂತರದ ಸ್ಥಾನಗಳಲ್ಲಿ ಹಾಂಕಾಂಗ್, ಜೂರಿಚ್, ಜಿನಿವಾ, ಚಿಕಾಗೋ, ಫ್ರಾಂಕಫರ್ಟ್, ಬೋಸ್ಟನ್, ಡಬ್ಲಿನ್ ನಗರಗಳಿವೆ. ಚೀನಾದ ಶಾಂಘೈ 35ನೇ ಸ್ಥನ ಪಡೆಯುವ ಮೂಲಕ ಭಾರತಕ್ಕಿಂತ ಮುಂದಿದ್ದರೆ, ಚೀನಾದ ಇನ್ನೊಂದು ನಗರ ಬೀಚಿಂಗ್ 51ನೇ ಸ್ಥಾನದ ಮೂಲಕ ಭಾರತಕ್ಕಿಂತ ಹಿಂದಿದೆ. |